'ದ ಪ್ಯಾರಡೇಸ್'​​, 'ಡೊರೋಥಿ' ಸಿನಿಮಾ ಒಟಿಟಿಗೆ ಲಗ್ಗೆ; ಎಂದು, ಎಲ್ಲಿ ನೋಡಲು ಲಭ್ಯ?..Dorothy

'ದ ಪ್ಯಾರಡೇಸ್'​​, 'ಡೊರೋಥಿ' ಸಿನಿಮಾ ಒಟಿಟಿಗೆ ಲಗ್ಗೆ; ಎಂದು, ಎಲ್ಲಿ ನೋಡಲು ಲಭ್ಯ?..Dorothy
Published on: 
  • ವಿಜಯದಶಮಿ ಪ್ರಯುಕ್ತ ನೆಟ್​ಫ್ಲಿಕ್ಸ್​​ನಲ್ಲಿ 'ದ ಪ್ಯಾರಡೈಸ್', ಡೊರೋಥಿ ರಿಲೀಸ್.

  • ಅ.22, 23ರಂದು ಕೀರ್ತಿ ಸುರೇಶ್​, ನಾನಿ ನಟನೆಯ ಸಿನಿಮಾಗಳು ಆನ್​ಲೈನ್​ಗೆ ಲಗ್ಗೆ.

  • ಎಲ್​ಜಿಬಿಟಿಕ್ಯೂ ಬಗ್ಗೆ ಹೇಳುವ ಸಿನಿಮಾ ಡೊರೋಥಿಗೆ ಬಾಯ್ಕಾಟ್​​ ಮತ್ತು ಪ್ರತಿಭಟನೆಯ ಬಿಸಿ ಇತ್ತು.

Dorothy, the paradise Movie Ott: ವಿಜಯದಶಮಿ ಪ್ರಯುಕ್ತ ಈ ವಾರ ಟಾಲಿವುಡ್​ನ ನಾನಿ ನಟನೆಯ 'ದ ಪ್ಯಾರಡೈಸ್' ಹಾಗೂ ಕಾಲಿವುಡ್​ ಸಿನಿಮಾ, ಕೀರ್ತಿ ಸುರೇಶ್​ ನಟನೆಯ ಡೊರೋಥಿ ಒಟಿಟಿಯಲ್ಲಿ ಮಿಂಚಲು ಸಜ್ಜಾಗಿದೆ. ಯಾವ ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ, ಎಂದು ನೋಡಬಹುದು ಎನ್ನುವ ಮಾಹಿತಿ ಇಲ್ಲಿದೆ.

ಜಗಮೇ ತಂದಿರಾಮ್, ಮಹಾನ್​, ಜಿಗರ್​ಥಂಡ, ರೆಟ್ರೋ ಸಿನಿಮಾ ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​ ಆಕ್ಷನ್​ ಕಟ್ ಹೇಳಿರುವ ಡೊರೋಥಿ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗಲಿದೆ. ಮಹಾ ನಟಿ ಕೀರ್ತಿ ಸುರೇಶ್​​, ರಿಷಿಕಾಂತ್, ಸನಂತ್ ನಟಿಸಿರುವ ಈ ಸಿನಿಮಾವನ್ನು ಅಕ್ಟೋಬರ್ 23ರಂದು ಕಣ್ತುಂಬಿಕೊಳ್ಳಬಹುದು.

ಡೊರೋಥಿ ವಿರುದ್ಧ ಬಾಯ್ಕಾಟ್ ಅಭಿಯಾನ

'ಡೊರೋಥಿ ಸಿನಿಮಾವು ಎಲ್​ಜಿಬಿಟಿಕ್ಯೂಗಳ ಬಗ್ಗೆ ಒತ್ತಿ ಹೇಳುವ ಸಿನಿಮಾವಾಗಿದೆ. ಇಂತಹದ್ದೊಂದು ಸಿನಿಮಾ ದೊಡ್ಡ ಪರೆದೆ ಮೇಲೆ ತೆರೆಕಂಡಿದ್ದು ಇದೇ ಮೊದಲಬಾರಿಗೆ. ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಮಾಡಿರುವ ಸಿನಿಮಾಗಳು ಇವೆ. ಆದರೆ, ಇದೇ ಮೊದಲ ಬಾರಿಗೆ ದೊಡ್ಡ ಮಟ್ಟಕ್ಕೆ ಎಲ್​ಜಿಬಿಟಿಕ್ಯೂ ಪರವಾದ ಸಿನಿಮಾ ಸದ್ದು ಮಾಡಿದ್ದು.

'ಡೊರೊಥಿ' ಚಿತ್ರ ಬಿಡುಗಡೆಯಾಗುವ ಮುನ್ನವೇ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ರಿಲೀಸ್ ಆದ ನಂತರ ಬಾಯ್ಕಾಟ್ ಅಭಿಯಾನವನ್ನು ಎದುರಿಸಿತ್ತು. ಸದ್ಯ ಈ ಸಿನಿಮಾದ ಒಟಿಟಿ ಸ್ಟ್ರೀಮಿಂಗ್​ ಹಕ್ಕನ್ನು ನೆಟ್​ಫ್ಲಿಕ್ಸ್ ಪಡೆದಿಕೊಂಡಿದ್ದು, ಕನ್ನಡ, ಮಲಯಾಳಂ, ಹಿಂದಿ, ತೆಲುಗು, ತಮಿಳಿನಲ್ಲಿ ನೋಡಬಹುದಾಗಿದೆ.

ಇಳಯರಾಜ ಸಂಗೀತಕ್ಕೆ ಸಿನಿಮಾ ರಂಗ ಫಿದಾ

ಸಿನಿಮಾಕ್ಕೆ ಇಳಯರಾಜರ ಸಂಗೀತ ಸಂಯೋಜಿಸಿದ್ದಾರೆ. ಕಲ್ಯಾಣಿ ವಿರಂಧು, ಮುತ್ತುಮಣಿ ಹಾಡುಗಳ ಕೇಳುಗರ ಮನ ತಣಿಸಿದೆ. ಚೈತ್ರಾ ಜೆ ಆಚಾರ್​​ ಸೇರಿದಂತೆ ಹಲವರು ಈ ಹಾಡನ್ನು ನೆಚ್ಚಿಕೊಂಡು ಪ್ರತ್ಯೇಕವಾಗಿ ಹಾಡಿದ್ದರು. ಇನ್ನು ಕನ್ನಡದ ನಟ ಉಪೇಂದ್ರ ಅವರು ಸಿನಿಮಾ ನೋಡಿ ಹೊಗಳಿದ್ದರು

ಡೊರೋಥಿ ಸಿನಿಮಾ ರಿಲೀಸ್ ಆಗಿದ್ದಾಗಹ ಚೆನ್ನೈನಲ್ಲಿ ಪ್ರತಿಭಟನೆ ನಡೆದಿತ್ತು. ಎಕ್ಸ್​ನಲ್ಲಿ ಬಾಯ್ಕಾಟ್ ಅಭಿಯಾನ ಶುರುವಾಗಿತ್ತು. ಈ ಮಧ್ಯೆಯೂ ಕೀರ್ತಿ ಸುರೇಶ್ ನಟನೆಯ ಈ ಸಿನಿಮಾಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ.

'ದ ಪ್ಯಾರಡೈಸ್​​'

ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡದ ನಾನಿ ನಟನೆಯದ ದ ಪ್ಯಾರಡೈಸ್ ಸಿನಿಮಾ ಅ.22ರಂದು ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಶ್ರೀಕಾಂತ್​ ಒಡೆಲಾ ನಿರ್ದೇಶನದ ಈ ಸಿನಿಮಾದಲ್ಲಿ ನಾನಿ, ಕಯಾದು ಲೋಹರ್​, ಮೋಹನ್ ಬಾಬು , ಸೋನಾಲಿ ಕುಲಕರ್ಣಿ, ಜುಯಲ್​​ ನಟಿಸಿದ್ದಾರೆ. ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರವೂ ಬುಡಕ್ಕಟ್ಟು ಸಮುದಾಯವು ಎದುರಿಸುವ ಸಮಸ್ಯೆ ಬಗ್ಗೆ, ಪೌರತ್ವ, ಹಕ್ಕು ಪಡೆದುಕೊಳ್ಳಲು ಹೋರಾಡುವ ಸುತ್ತ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಅ.22ರಂದು ನೆಟ್ಟಫ್ಲಿಕ್ಸ್​ನಲ್ಲಿ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ನೋಡಬಹುದಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net