ಕನ್ನಡ ಚಿತ್ರರಂಗದಲ್ಲೊಂದು ಹೊಸ ಪೇಟೆ … ಅದೇ ‘ಡಾಲರ್ಸ್ ಪೇಟೆ’

A Day in Dollarspete (1)
Published on

ಬೆಂಗಳೂರು: ಕನ್ನಡದಲ್ಲಿ ಈಗಾಗಲೇ 'ಮುಗಿಲ್​ ಪೇಟೆ', 'ಕಾಟನ್​ ಪೇಟೆ' ಮುಂತಾದ ಚಿತ್ರಗಳು ಬಂದಿವೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ 'ಡಾಲರ್ಸ್​ ಪೇಟೆ'.

ಈಗಾಗಲೇ 'ಮದಗಜ' ಸೇರಿದಂತೆ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮೋಹನ್ ಎನ್ ಮುನಿನಾರಾಯಣಪ್ಪ, ಈಗ ‘ಡಾಲರ್ಸ್ ಪೇಟೆ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದು, ಇದೊಂದು ಹೈಪರ್ ಲಿಂಕ್ ಥ್ರಿಲ್ಲರ್ ಚಿತ್ರವಾಗಿದ್ದು, ಅವರೇ ಕಥೆ, ಚಿತ್ರಕಥೆಯನ್ನು ರಚಿಸಿದ್ದಾರೆ.

‘ಡಾಲರ್ಸ್ ಪೇಟೆ’ ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ, ವೆಂಕಟ್ ರಾಜು, ಮುಂತಾದವರು ನಟಿಸಿದ್ದು, ಪೃಥ್ವಿ ಅಂಬರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ, ಆನಂದ್ ಸುಂದರೇಶ ಛಾಯಾಗ್ರಹಣವಿದ್ದು, ಪೆಂಟ್ರಿಕ್ಸ್ ಎಂಟಟೈನ್ಮೆಂಟ್ಸ್ ಬ್ಯಾನರ್​ನಡಿ ಪೂಜಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net