ಒಂದಾಗುತ್ತಾರಾ ಚಿರು-ಪವನ್?; ತಮ್ಮನೊಂದಿಗೆ ನಟಿಸುವಾಸೆ ವ್ಯಕ್ತಪಡಿಸಿದ ಮೆಗಾಸ್ಟಾರ್

Chiru Pawan
Published on

ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಇಬ್ಬರೂ ತೆಲುಗು ಚಿತ್ರರಂಗದ ಅತಿ ದೊಡ್ಡ ಸ್ಟಾರ್​ಗಳು. ಅಣ್ಣ ತಮ್ಮ ಆಗಿದ್ದರೂ, ಇದುವರೆಗೂ ಇಬ್ಬರೂ ಒಟ್ಟಿಗೆ ನಟಿಸಿಲ್ಲ. ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಆ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಾರಂತೆ, ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರಂತೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಇದುವರೆಗೂ ಅದು ಸಾಧ್ಯವಾಗಿಲ್ಲವಷ್ಟೇ.

ಈಗ ಖುದ್ದು ಚಿರಂಜೀವಿ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ‘ಪವನ್ ಕಲ್ಯಾಣ್ ಜತೆ ನಟಿಸುವ ಐಡಿಯಾ ನನಗೂ ಇಷ್ಟ. ಪವನ್​ಗೂ ನನ್ನ ಜತೆ ನಟಿಸುವ ಆಸೆಯಿದೆ ಎಂದುಕೊಂಡಿದ್ದೇನೆ. ಆದರೆ, ನಮ್ಮಿಬ್ಬರಿಗೂ ಒಪು್ಪವ ಒಂದೊಳ್ಳೆ ಕಥೆ ಬೇಕಿದೆ’ ಎಂದು ಹೇಳಿಕೊಂಡಿದ್ದಾರೆ ಚಿರು.

ಇನ್ನು ಚಿರಂಜೀವಿ ನಟಿಸಿರುವ ‘ಗಾಡ್ ಫಾದರ್’ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸದ್ಯ ಅವರು ನಿರ್ದೇಶಕ ಬಾಬಿ ಜತೆ ತಮ್ಮ 154ನೇ ಚಿತ್ರದ ಚಿತ್ರೀಕರಣಕ್ಕೆ ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ ಪವನ್ ಕಲ್ಯಾಣ್ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net