ಕಾಲೇಜಿನಲ್ಲಿ ಅಸ್ಥಿಪಂಜರ, ಫಾಂಟ ಬಾಟಲ್​ ಎಂದು ಟ್ರೋಲ್​: ಇಂದು ಈಕೆಯ ಹೊಸ ಅವತಾರ ಕಂಡು ಶಾಕ್​!

Divya Bharati
Published on

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟಿ ದಿವ್ಯಾ ಭಾರತಿ ಅವರ ಕಾಲೇಜು ದಿನಗಳ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದರ ಬೆನ್ನಲ್ಲೇ ವೈರಲ್​ ಫೋಟೋ ಹಿಂದಿರುವ ಕಹಿ ಘಟನೆಯನ್ನು ದಿವ್ಯಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೆಲುಕು ಹಾಕಿದ್ದಾರೆ.

ನಟಿ ದಿವ್ಯಾ ಭಾರತಿ ತಮ್ಮ ಮೊದಲ ಚಿತ್ರದಲ್ಲೇ ಹಲವಾರು ಅಭಿಮಾನಿಗಳನ್ನು ಸೆಳೆದಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದ ದಿವ್ಯಾ, ಸಂಗೀತ ನಿರ್ದೇಶಕ ಹಾಗೂ ನಟ ಜಿ.ವಿ.ಪ್ರಕಾಶ್ ಅಭಿನಯದ ಬ್ಯಾಚುಲರ್​ ಚಿತ್ರದ ಮೂಲಕ ನಾಯಕಿಯಾಗಿ ಪಾದರ್ಪಣೆ ಮಾಡಿದರು.

ಇತ್ತೀಚೆಗಷ್ಟೇ ಬಿಡುಗಡೆಯಾಗಿ ಒಳ್ಳೆಯ ಹೆಸರು ಮಾಡಿರುವ ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರದಲ್ಲಿ ದಿವ್ಯಾ ಭಾರತಿ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಮುಂಬರುವ ಚಿತ್ರಗಳಾದ ಕಿಂಗ್​ಸ್ಟನ್​, ಆಸೈ, ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​ ಮತ್ತು ಮಧಿಲ್​ ಮೇಲ್​ ಕಾದಲ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕಾಲೇಜು ದಿನಗಳಲ್ಲಿ ತನ್ನ ದೇಹದ ಆಕಾರದ ಬಗ್ಗೆ ಚುಡಾಯಿಸುತ್ತಿದ್ದುದನ್ನು ದಿವ್ಯಾ ಭಾರತಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಕಾಲೇಜಿನ ಸಮಯದಲ್ಲಿ ನನಗೆ ಫಾಂಟ ಬಾಟಲಿಯ ರಚನೆ, ಅಸ್ಥಿಪಂಜರ, ದಪ್ಪ ನಿತಂಬದ ಹುಡುಗಿ ಎಂದು ಕಾಮೆಂಟ್​ ಮಾಡುತ್ತಿದ್ದರು. ಇವು ನಿಜವಾಗಿಯೂ ನನ್ನ ಮೇಲೆ ಪರಿಣಾಮ ಬೀರಿತು. ನನ್ನ ದೇಹವನ್ನು ದ್ವೇಷಿಸುವ ಹಂತಕ್ಕೆ ನನ್ನನ್ನು ತಳ್ಳಿದರು. ಜನರ ಮುಂದೆ ನಡೆಯಲು ಕೂಡ ನಾನು ಹೆದರುತ್ತಿದ್ದೆ. ಆದರೆ, 2015ರಲ್ಲಿ ನಾನು ಇನ್​ಸ್ಟಾಗ್ರಾಂ ಖಾತೆಯನ್ನು ಪ್ರಾರಂಭಿಸುವ ಮೂಲಕ ನನ್ನ ಮಾಡೆಲಿಂಗ್ ಪ್ರಯಾಣವನ್ನು ಪ್ರಾರಂಭಿಸಿದೆ. ನಾನು ಅದರಲ್ಲಿ ಪೋಸ್ಟ್ ಮಾಡಿದ ಪ್ರತಿ ಹೊಸ ಫೋಟೋಗೆ ಅಭಿನಂದನೆಗಳು ಬರಲಾರಂಭಿಸಿದವು ಎಂದು ತಿಳಿಸಿದ್ದಾರೆ.

ನೀನು ಯಾವುದೇ ರೀತಿಯ ದೇಹವನ್ನು ಹೊಂದಿದ್ದರೂ ಪರವಾಗಿಲ್ಲ. ಇಷ್ಟೆಲ್ಲ ಟೀಕೆಗಳ ನಡುವೆ ನಿನ್ನನ್ನು ನೀನು ಹೇಗೆ ಪ್ರೀತಿಸುತ್ತೀಯ ಎಂಬುದಷ್ಟೇ ಮುಖ್ಯ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದಿವ್ಯಾ ಭಾರತಿ ಫೋಟೋ ಮತ್ತು ಈಗಿನ ಫೋಟೋಗಳನ್ನು ನೋಡಿ ಅಭಿಮಾನಿಗಳು ಅಚ್ಚರಿಗೀಡಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net