ಥಿಯೇಟರ್​ನಲ್ಲಿ ಕೊಡುವ ಇಂಟರ್​ವೆಲ್​ ಹುಟ್ಟಿಕೊಂಡಿದ್ದೇಗೆ? ಸಿನಿಪ್ರಿಯರಿಗೆ ಸಿಗೋ ಪಾಪ್​ಕಾರ್ನ್​ ಬ್ರೇಕ್ ಹಿಂದಿದೆ ಸಖತ್​ ಇಂಟ್ರೆಸ್ಟಿಂಗ್ ಸ್ಟೋರಿ | Interval

ಟ್ವಿಸ್ಟ್​ ಎದುರಾಗುತ್ತಿದೆ ಎನ್ನುವಾಗಲೇ ಬೆಳ್ಳಿಪರದೆಯ ಮೇಲೆ ಇಂಟರ್ವೆಲ್ ಎಂಬ ಕಾರ್ಡ್ ಅಡ್ಡಲಾಗಿ ಪ್ರದರ್ಶನವಾಗುತ್ತದೆ. ಆ ಕ್ಷಣದಲ್ಲಿ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಾಗುತ್ತದೆ. ಅಯ್ಯೋ ಏನಾಯಿತೋ ಏನೋ ಎಂಬ ಮಾತುಗಳು ಕೇಳಿಬರುತ್ತವೆ. ಕೆಲವರಿಗಂತು ಸೆಕೆಂಡ್​ ಆಫ್​ ನೋಡುವ ಕೌತುಕ ಇನ್ನಷ್ಟು ಹೆಚ್ಚಾಗುತ್ತದೆ.
 Interval
ಥಿಯೇಟರ್​ನಲ್ಲಿ ಕೊಡುವ ಇಂಟರ್​ವೆಲ್​ ಹುಟ್ಟಿಕೊಂಡಿದ್ದೇಗೆ? ಸಿನಿಪ್ರಿಯರಿಗೆ ಸಿಗೋ ಪಾಪ್​ಕಾರ್ನ್​ ಬ್ರೇಕ್ ಹಿಂದಿದೆ ಸಖತ್​ ಇಂಟ್ರೆಸ್ಟಿಂಗ್ ಸ್ಟೋರಿ | Interval
Published on: 

Movie Interval: ಚಿತ್ರಮಂದಿರಗಳಲ್ಲಿ 2ರಿಂದ 3 ಗಂಟೆಗಳಿಗೂ ಹೆಚ್ಚು ಕಾಲ ತಮ್ಮ ನೆಚ್ಚಿನ ಸಿನಿಮಾಗಳನ್ನು ಸಖತ್ ಎಂಜಾಯ್ ಮಾಡುವ ಚಿತ್ರಪ್ರೇಮಿಗಳು, ತಾವು ಹೋಗುವ ಚಿತ್ರದಲ್ಲಿ ಕೊಡುವ ಇಂಟರ್​ವೆಲ್​ ಅಥವಾ ಮಧ್ಯಂತರದಲ್ಲಿ ತಮ್ಮಿಷ್ಟದ ಪಾಪ್​ಕಾರ್ನ್​, ಜ್ಯೂಸ್​ಗಳನ್ನು ತೆಗೆದುಕೊಂಡು, ನಂತರ ದ್ವಿತೀಯಾರ್ಧವನ್ನು ಸೇವಿಸುತ್ತಾ ವೀಕ್ಷಿಸುತ್ತಾರೆ. ಅಸಲಿಗೆ, ನಿಮ್ಮ ತಲೆಗೆ ಎಂದಾದರೂ ಈ ಇಂಟರ್​ವೆಲ್​ ಅನ್ನೋ ಪದ ಏಕೆ ಬಂತು ಎಂಬ ಪ್ರಶ್ನೆ ಕಾಡಿದ್ಯಾ? ಇದು ಜನರಿಗೆ ಬ್ರೇಕ್​ ಕೊಟ್ಟು ತೋರಿಸೋಣ ಅಂತನಾ ಅಥವಾ ಕಣ್ಣಿಗೆ ಸ್ವಲ್ಪ ಮಟ್ಟಿಗೆ ರೆಸ್ಟ್ ಸಿಗಲಿ ಎಂದು ಕೊಡುವುದಾ? ಎಂಬ ಪ್ರಶ್ನೆಗಳ ಮಧ್ಯೆ ಇದರ ಹಿಂದೆ ಒಂದು ರೋಚಕ ಕಥೆಯೇ ಅಡಗಿದೆ ಎಂಬುದನ್ನು ನಾವಿಲ್ಲಿ ತಿಳಿಯೋಣ ಬನ್ನಿ.

ಚಿತ್ರಮಂದಿರಕ್ಕೆ ಹೋದ ನಂತರ ಲೈಟ್ಸ್​ ಆಫ್​ ಆಗುತ್ತಿದ್ದಂತೆ ಸಿನಿಮಾ ಈಗ ಶುರು ಎಂಬ ಸೂಚನೆ ನಮ್ಮೆಲ್ಲರಿಗೂ ಗೊತ್ತಿದೆ. ಕಥೆಯಲ್ಲಿ ಬಹುದೊಡ್ಡ ಟ್ವಿಸ್ಟ್ ನಡೆಯಲಿರುವಾಗಲೇ, ನಾಯಕ ಖಳನಾಯಕನಿಗೆ ಮುಖಾಮುಖಿಯಾಗುವ ದೃಶ್ಯವಾಗಲಿ ಅಥವಾ ಅನಿರೀಕ್ಷಿತ ಸಸ್ಪೆನ್ಸ್, ಟ್ವಿಸ್ಟ್​ ಎದುರಾಗುತ್ತಿದೆ ಎನ್ನುವಾಗಲೇ ಬೆಳ್ಳಿಪರದೆಯ ಮೇಲೆ ಇಂಟರ್ವೆಲ್ ಎಂಬ ಕಾರ್ಡ್ ಅಡ್ಡಲಾಗಿ ಪ್ರದರ್ಶನವಾಗುತ್ತದೆ. ಆ ಕ್ಷಣದಲ್ಲಿ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಾಗುತ್ತದೆ. ಅಯ್ಯೋ ಏನಾಯಿತೋ ಏನೋ ಎಂಬ ಮಾತುಗಳು ಕೇಳಿಬರುತ್ತವೆ. ಕೆಲವರಿಗಂತು ಸೆಕೆಂಡ್​ ಆಫ್​ ನೋಡುವ ಕೌತುಕ ಇನ್ನಷ್ಟು ಹೆಚ್ಚಾಗುತ್ತದೆ.

ನಮ್ಮನ್ನು ನಮ್ಮ ಸೀಟಿನ ತುದಿಯಲ್ಲಿ ಕೂರಿಸಲು ಮತ್ತು ಕಥೆಯನ್ನು ಬರೆಯುವಾಗ ಪ್ರೇಕ್ಷಕರಿಗೆ ಮನಸ್ಸಿಗೆ ಮುದ ನೀಡುವ ಥ್ರಿಲ್ ನೀಡಲು ನಿರ್ದೇಶಕರು ಅಂತಹ ಪರಿಪೂರ್ಣವಾದ ಇಂಟರ್ವೆಲ್ ಬ್ಯಾಂಗ್ ಅನ್ನು ಮೊದಲೇ ತಮ್ಮ ಚಿತ್ರದ ಕಥೆಗಳಲ್ಲಿ ಸೇರಿಸಿರುತ್ತಾರೆ ಎಂಬ ಕಲ್ಪನೆ ಹಲವರಿಗಿದೆ. ಆಸಲಿಗೆ, ಎಷ್ಟೋ ಮಂದಿಗೆ ಇನ್ನೂ ಯಾವ ಕಾರಣಕ್ಕೆ ಈ ಮಧ್ಯಂತರ ಕೊಡುತ್ತಾರೆ ಎಂಬುದೇ ಗೊತ್ತಿಲ್ಲ. ಕಥೆಯ ಬೇಡಿಕೆಗಳಿಂದಲೋ ಅಥವಾ ಬರಹಗಾರರ ಶ್ರೇಷ್ಠ ಕಲ್ಪನೆಗಳಿಂದ ಇದು ಹುಟ್ಟಿಕೊಂಡಿಲ್ಲ. ತೆರೆಮರೆ ಮತ್ತು ಪ್ರೊಜೆಕ್ಟರ್‌ಗಳ ಚಲನವಲನಗಳ ಹಿಂದೆ ನಡೆಯುತ್ತಿದ್ದ ಅಂದಿನ ಕಾಲದ ತಾಂತ್ರಿಕ ತೊಂದರೆಗಳನ್ನು ಮುಚ್ಚಿಡಲು ಈ ಇಂಟರ್​ವೆಲ್​ ಹುಟ್ಟಿಕೊಂಡಿತು ಎಂಬುದೇ ಕಟುಸತ್ಯ.

1970ರ ಕಾಲದ ಸಿನಿಮಾ ದಿನಗಳನ್ನು ನೆನಪಿಸಿಕೊಂಡರೆ, ಈಗಿನಂತೆ ಸ್ಯಾಟಲೈಟ್ ವ್ಯವಸ್ಥೆ, ಡಿಜಿಟಲ್ ಕ್ಯೂಬ್ ತಂತ್ರಜ್ಞಾನ, ಹಾರ್ಡ್ ಡಿಸ್ಕ್ ಇರಲಿಲ್ಲ. ಬೃಹತ್ ಫಿಲ್ಮ್ ರೀಲ್​ಗಳನ್ನು ಪ್ರೊಜೆಕ್ಟರ್​ಗಳಲ್ಲಿ ತುಂಬಿ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿತ್ತು. ವಿಶೇಷವಾಗಿ ಪಟ್ಟಣಗಳು ​​ಮತ್ತು ಹಳ್ಳಿಗಳಲ್ಲಿ, ಟೆಂಟ್ ಹಾಲ್‌ಗಳು ಒಂದೇ ಪ್ರೊಜೆಕ್ಟರ್ ಅನ್ನು ಹೊಂದಿದ್ದವು. ಒಂದು ದೊಡ್ಡ ರೀಲ್ ಮುಗಿದ ನಂತರ, ಅದನ್ನು ತೆಗೆದುಹಾಕಲು ಮತ್ತು ಎರಡನೇ ರೀಲ್ ಅನ್ನು ಲೋಡ್ ಮಾಡಲು ಆಪರೇಟರ್​ಗಳು ಕನಿಷ್ಠ ಹತ್ತರಿಂದ ಹದಿನೈದು ನಿಮಿಷಗಳನ್ನು ತೆಗೆದುಕೊಳ್ಳುತ್ತಿತ್ತು. ಕೆಲವು ದೊಡ್ಡ ಚಿತ್ರಮಂದಿರಗಳು ಎರಡು ಪ್ರೊಜೆಕ್ಟರ್‌ಗಳನ್ನು ಹೊಂದಿದ್ದರೂ, ಆ ಕಾಲದ ಭಾರತೀಯ ಚಲನಚಿತ್ರಗಳು ಸುಮಾರು ಮೂರರಿಂದ ಮೂರೂವರೆ ಗಂಟೆಗಳ ಕಾಲ ಓಡುತ್ತಿದ್ದವು.

ಪ್ರೊಜೆಕ್ಟರ್ ಆರ್ಕ್ ಲ್ಯಾಂಪ್‌ಗಳು ನಿರಂತರವಾಗಿ ರನ್​ ಆಗುತ್ತಿದ್ದಾಗ, ಹೆಚ್ಚು ಬಿಸಿಯಾದ ಯಂತ್ರಗಳನ್ನು ತಂಪಾಗಿಸಲು ಮತ್ತು ಭಾರವಾದ ರೀಲ್‌ಗಳನ್ನು ಬದಲಾಯಿಸುವುದು ಅಲ್ಲಿನ ಸಿಬ್ಬಂದಿಗಳಿಗೆ ಅತಿದೊಡ್ಡ ಸವಾಲಾಗಿತ್ತು. ರೀಲುಗಳನ್ನು ಬದಲಾಯಿಸುವಾಗ ಆ ಕೆಲವು ನಿಮಿಷಗಳ ಕಾಲ ಪರದೆಯು ಖಾಲಿಯಾಗಿದ್ದರೆ ಅಥವಾ ಕತ್ತಲೆಯಾಗಿದ್ದಾಗ ಪ್ರೇಕ್ಷಕರು ತಾಳ್ಮೆ ಕಳೆದುಕೊಳ್ಳುತ್ತಿದ್ದರು. ಈ ಖಾಲಿ ಸಮಯವನ್ನು ಹೇಗಾದರೂ ಮುಚ್ಚಿಹಾಕಲು ಯೋಚಿಸುತ್ತಿರುವಾಗಲೇ ಹುಟ್ಟಿಕೊಂಡಿದ್ದು ಈ ಇಂಟರ್ವಲ್ ಎಂಬ ಅಧಿಕೃತ ವಿರಾಮ. ಇದು ಟೆಕ್ನಿಕಲ್​ ವಿಭಾಗದವರಿಗೆ ಅಂದಿನ ಮಟ್ಟಕ್ಕೆ ದೊಡ್ಡ ಸುಧಾರಣೆಯನ್ನು ನೀಡಿತು.

ಕಾಲಾನಂತರದಲ್ಲಿ, ತಂತ್ರಜ್ಞಾನವು ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಈಗ ಡಿಜಿಟಲ್​ ಯುಗ ಚಿತ್ರೋದ್ಯಮವನ್ನೇ ಆಳುತ್ತಿದೆ. ಫಿಲ್ಮ್ ರೀಲ್‌ಗಳ ಯುಗ ಅಕ್ಷರಶಃ ಕೊನೆಗೊಂಡಿದೆ ಮತ್ತು ಡಿಜಿಟಲ್ ಪ್ರೊಜೆಕ್ಷನ್ ಬಂದಿದೆ. ಒಂದೇ ಒಂದು ಬಟನ್ ಒತ್ತಿದರೆ ಸಾಕು ಸಿನಿಮಾ ಎಲ್ಲಿಯೂ ನಿಲ್ಲದೆ ಗಂಟೆಗಟ್ಟಲೆ ಓಡುತ್ತದೆ. ಅದಕ್ಕಾಗಿಯೇ ಹಾಲಿವುಡ್ ಮತ್ತು ಪ್ರಪಂಚದಾದ್ಯಂತದ ಅನೇಕ ದೇಶಗಳು ಈ ಇಂಟರ್​ವೆಲ್​ ಸಂಪ್ರದಾಯವನ್ನು ಈಗಾಗಲೇ ಮುಕ್ತಾಯಗೊಳಿಸಿವೆ. ಅಲ್ಲಿನ ಥಿಯೇಟರ್​ನಲ್ಲಿ ಸಿನಿಮಾ ಶುರುವಾದರೆ ಎಂಡ್ ಕಾರ್ಡ್ ಪ್ಲೇ ಆಗುವವರೆಗೂ ನೋಡುವುದು ಅನಿವಾರ್ಯ. ಆದರೆ, ಭಾರತೀಯ ಚಲನಚಿತ್ರೋದ್ಯಮದಲ್ಲಿ, ಆ ತಾಂತ್ರಿಕ ಅಗತ್ಯವನ್ನು ಪೂರೈಸಿದ್ದರೂ, ಮಧ್ಯಂತರ ವಿರಾಮ ಇಂದಿಗೂ ಕೊನೆಗೊಂಡಿಲ್ಲ. ಕೆಲವೇ ಕೆಲವು ಹಾಲಿವುಡ್ ಅಥವಾ ಹಿಂದಿ ಸಿನಿಮಾಗಳು ಕಂಪ್ಲೀಟ್​ ಆಗಿ ಇಂಟರ್​​ವೆಲ್​ ಇಲ್ಲದೆಯೇ ಪ್ರೇಕ್ಷಕರಿಗೆ ನೋಡಲು ಲಭ್ಯವಾಗುತ್ತವೆ.​

Also Read
ಒಂದಲ್ಲ, ಎರಡಲ್ಲ, ಹಲವು ಬಾರಿ ಬ್ರೂಕ್ಲಿನ್ ಬ್ರಿಡ್ಜ್ ಮಾರಿದವನ ವಂಚನೆ ಕಥೆ ಕೇಳಿದ್ರೆ ನೀವು ಬೆಕ್ಕಸ ಬೆರಗಾಗ್ತೀರಾ!
 Interval

ಅಸಲಿಗೆ, ಹದಿನೈದು ನಿಮಿಷಗಳ ಮಧ್ಯಂತರದಲ್ಲಿ ಮಾರಾಟವಾಗುವ ಪಾಪ್‌ಕಾರ್ನ್, ಸಮೋಸಾ, ಕೂಲ್​ ಡ್ರಿಂಕ್​ಗಳು ಮತ್ತು ನೀರಿನ ಬಾಟಲಿಗಳು ಥಿಯೇಟರ್ ಮಾಲೀಕರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಮಲ್ಟಿಪ್ಲೆಕ್ಸ್​ಗಳ ಅರ್ಧದಷ್ಟು ಲಾಭ ಈ ಇಂಟರ್ವಲ್ ತಿಂಡಿಗಳಿಂದ ಬಂದರೂ ಆಶ್ಚರ್ಯವಿಲ್ಲ ಎಂದೇ ಹೇಳಬಹುದು. ವ್ಯಾಪಾರದ ಜತೆಗೆ ಮತ್ತೊಂದು ಕುತೂಹಲಕಾರಿ ಬದಲಾವಣೆ ಕೂಡ ಕಥೆಗಳಲ್ಲಿ ಬಂದಿದೆ. ಹಿಂದೊಮ್ಮೆ ರೀಲ್ ಬದಲಿಸಲು ಬಳಸುತ್ತಿದ್ದ ಬ್ರೇಕ್, ಕ್ರಮೇಣ ನಮ್ಮ ಸಿನಿಮಾ ಬರಹಗಾರರ ಚಿಂತನೆಯನ್ನೇ ಬದಲಿಸಿದೆ. ಚಿತ್ರ ಪ್ರಾರಂಭವಾದ ಒಂದೂವರೆ ಗಂಟೆಯ ನಂತರ ಒಂದು ರೋಚಕ ಟ್ವಿಸ್ಟ್ ಬರಬೇಕು ಎಂಬ ಕಲ್ಪನೆಯೊಂದಿಗೆ ಈಗ ನಿರ್ದೇಶಕರು ಮತ್ತು ಬರಹಗಾರರು ತಮ್ಮ ಕಥೆಗಳನ್ನು ಬರೆಯಲು ಪ್ರಾರಂಭಿಸಿರುವುದು ಇನ್ನೊಂದು ಕುತೂಹಲಕಾರಿ ವಿಷಯವೇ ಸರಿ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net