ತಾಕತ್ತಿದ್ರೆ ಮೊದಲು ಇದನ್ನು ಮಾಡಿ ತೋರಿಸಿ… ಟ್ರೋಲಿಗರಿಗೆ ಓಪನ್​ ಚಾಲೆಂಜ್​ ಹಾಕಿದ ಗಾಯಕಿ ಚಿನ್ಮಯಿ!

Chinmayi
Published on

ಚೆನ್ನೈ: ಗಾಯಕಿ ಹಾಗೂ ಡಬ್ಬಿಂಗ್​ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆಯ ವಿರುದ್ಧ ಸದಾ ಧ್ವನಿ ಎತ್ತಿ, ಸರ್ಕಾರವನ್ನು ಪ್ರಶ್ನೆ ಮಾಡುತ್ತಿರುತ್ತಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ ಅವರು ಯಾವಾಗಲೂ ನ್ಯಾಯದ ಪರವಾಗಿ ನಿಲ್ಲುತ್ತಾರೆ ಮತ್ತು ನ್ಯಾಯವನ್ನು ಬೆಂಬಲಿಸಿ ಕಾಮೆಂಟ್​ ಮಾಡುತ್ತಿರುತ್ತಾರೆ. ಅನೇಕರು ಆಕೆಯನ್ನು ಬೆಂಬಲಿಸಿದರೆ, ಕೆಲವರು ಆವರ ವಿರುದ್ಧ ಟ್ರೋಲ್​ ಸಹ ಮಾಡುತ್ತಾರೆ.

ಎಷ್ಟೇ ಟ್ರೋಲ್​ ಮಾಡಿದರೂ ಮತ್ತು ಎಷ್ಟೇ ಟೀಕೆ ಮಾಡಿದರೂ ಚಿನ್ಮಯಿ ಶ್ರೀಪಾದ ಮಾತ್ರ ನ್ಯಾಯದ ಪರವಾಗಿ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಕೌಟುಂಬಿಕ ಹಿಂಸಾಚಾರ ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ಅವರು ಯಾವಾಗಲೂ ಧ್ವನಿ ಎತ್ತುತ್ತಾರೆ. ಇತ್ತೀಚೆಗಷ್ಟೇ ಚಿನ್ಮಯಿ ಅವರು ಟ್ರೋಲರ್‌ಗಳಿಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ.

ಕೆಟ್ಟದಾಗಿ ಕಾಮೆಂಟ್​ ಮಾಡುವವರಿಗೆ ಸವಾಲು ಹಾಕಿರುವ ಚಿನ್ಮಯಿ, ನಿಮಗೆ ತಾಕತ್ತಿದ್ದರೆ ಸ್ವಂತವಾಗಿ ಮತ್ತು ತಮ್ಮದೇ ಹೆಸರಿನಲ್ಲಿ ಖಾತೆಗಳನ್ನು ರಚಿಸಿ, ಆಮೇಲೆ ಕಾಮೆಂಟ್​ ಮಾಡಿ ಎಂದಿದ್ದಾರೆ. ಅದನ್ನು ಬಿಟ್ಟು ನಕಲಿ ಐಡಿ, ನಕಲಿ ಹೆಸರುಗಳು ಮತ್ತು ನಕಲಿ ಫೋಟೋಗಳೊಂದಿಗೆ ಖಾತೆಗಳನ್ನು ರಚಿಸಬೇಡಿ. ಮುಖವಾಡ ಧರಿಸಿ ಕೆಟ್ಟ ಕಾಮೆಂಟ್​ಗಳನ್ನು ಮಾಡುವುದನ್ನು ಬಿಟ್ಟು ಧೈರ್ಯವಿದ್ದರೆ ನಿಮ್ಮ ನಿಜವಾದ ಮುಖ ತೋರಿಸಿ ಎಂದು ಸವಾಲು ಹಾಕಿದ್ದಾರೆ.

ನೀವು ಮೊದಲು ನನ್ನ ಸವಾಲನ್ನು ಸ್ವೀಕರಿಸಿ ಆಮೇಲೆ ನೀವು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ನೀಡುತ್ತೇನೆ ಎಂದು ಚಿನ್ಮಯಿ ಹೇಳಿದ್ದಾರೆ. ಮಹಿಳೆಯರು ಏನೇ ಮಾಡಿದರು ಟ್ರೋಲ್​ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ಮಹಿಳೆಯರು ಹೇಗಿರಬೇಕು ಎಂದು ಹೇಳುತ್ತಾರೆ ಮತ್ತು ಪುರುಷರು ಜತೆ ಹೇಗೆ ಮಾತನಾಡಬೇಕೆಂದು ನಮಗೆ ಹೇಳುತ್ತಾರೆ? ಇದನ್ನೆಲ್ಲ ಹೇಳಲು ಅವರು ಯಾರು? ಅನೇಕ ಮಹಿಳೆಯರು ಇಂದಿಗೂ ಕೌಟುಂಬಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಮೊದಲು ಅದರ ವಿರುದ್ಧ ಧ್ವನಿ ಎತ್ತಿ ಮತ್ತು ನಿಮಗೆ ಧೈರ್ಯವಿದ್ದರೆ ಅಸಲಿ ಮುಖ ತೋರಿಸಿ ಎಂದು ಚಿನ್ಮಯಿ ಓಪನ್​ ಚಾಲೆಂಜ್​ ಮಾಡಿದ್ದಾರೆ.

ಅಂದಹಾಗೆ ಗಾಯಕಿ ಚಿನ್ಮಯಿ ಅವರು ದಕ್ಷಿಣ ಭಾರತದಲ್ಲಿ ಮೀಟೂ ಚಳುವಳಿಯನ್ನು ಮುನ್ನಡೆಸಿದರು. ಆ ಸಮಯದಲ್ಲಿ, ಅವರು ತಮಿಳು ಚಿತ್ರರಂಗದ ಪ್ರಮುಖ ಬರಹಗಾರ ವೈರಮುತ್ತು ವಿರುದ್ಧ ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಕನ್ನಡದ ಗಾಯಕ ರಘು ದೀಕ್ಷಿತ ವಿರುದ್ಧವೂ ಮೀಟೂ ಆರೋಪ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net