ಹಿರಣ್ಯ ಚಿತ್ರಕ್ಕೆ ಬಂದ ದಿವ್ಯಾ; ವಿಶೇಷ ಪಾತ್ರದಲ್ಲಿ ಮಾಜಿ ಬಿಗ್​ಬಾಸ್ ಸ್ಪರ್ಧಿ

Divya
Published on

ಬೆಂಗಳೂರು: ‘ಬಿಚ್ಚುಗತ್ತಿ’ ಸಿನಿಮಾ ಖ್ಯಾತಿಯ ನಟ ರಾಜವರ್ಧನ್ ಇತ್ತೀಚೆಗಷ್ಟೇ ‘ಹಿರಣ್ಯ’ ಎಂಬ ಹೊಸ ಸಿನಿಮಾ ಘೋಷಿಸಿದ್ದರು. ನಾಯಕಿಯಾಗಿ ರೂಪದರ್ಶಿ ರಿಹಾನಾ ನಟಿಸುವುದೂ ಅಧಿಕೃತವಾಗಿತ್ತು. ಇದೀಗ ಇದೇ ಚಿತ್ರಕ್ಕೆ ಬಿಗ್​ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಆಗಮನವಾಗಿದೆ.

‘ರೌಡಿ ಬೇಬಿ’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ದಿವ್ಯಾ, ‘ಹಿರಣ್ಯ’ ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಆ ಪಾತ್ರವೇನು ಎಂಬುದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದ್ದು, ಇದೇ 9ರಿಂದ ಶೂಟಿಂಗ್​ನಲ್ಲಿಯೂ ಅವರು ಭಾಗವಹಿಸಲಿದ್ದಾರೆ. ವೇದಾಸ್ ಇನ್ಪಿನಿಟಿ ಪಿಕ್ಚರ್ಸ್ ಸಂಸ್ಥೆಯಡಿ ವಿಘ್ನೇಶ್ವರ ಮತ್ತು ವಿಜಯ್ ಕುಮಾರ್ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಪ್ರವೀಣ್ ಅವ್ಯುಕ್ತ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net