ಅವತಾರ್ ಸೀಕ್ವೆಲ್​ ನೋಡಲು ಇನ್ನೆಷ್ಟು ವರ್ಷ ಕಾಯಬೇಕು ಗೊತ್ತಾ?

Avatar
Published on

2009ರಲ್ಲಿ ತೆರೆಗೆ ಬಂದಿದ್ದ ಹಾಲಿವುಡ್​ನಲ್ಲಿ ಸಿದ್ದವಾಗಿದ್ದ ಅವತಾರ ಸಿನಿಮಾ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಅದಾದ ಬಳಿಕ ಅದೇ ಸಿನಿಮಾ ಸೀಕ್ವೆಲ್​ ಆಗಲಿದೆ ಎಂದಾಗ ಅಷ್ಟೇ ಕುತೂಹಲವೂ ಮೂಡಿತ್ತು. ಅದರಂತೆ ಈಗಾಗಲೇ ಸೀಕ್ವೆಲ್ ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆ. ಇನ್ನೇನು ಶೀಘ್ರದಲ್ಲಿ ಬಿಡುಗಡೆ ಆಗಲಿದೆ ಎಂದೂ ಹೇಳಲಾಗಿತ್ತು. ಆದರೆ, ಸದ್ಯದ ಕರೊನಾ ಹಾವಳಿಯನ್ನು ಗಮನಿಸಿದರೆ, ಅವತಾರ ಸಿನಿಮಾ ನೋಡಲು ಸದ್ಯಕ್ಕೆ ಆಗದು!

ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, 2021ಕ್ಕೆ ಅವತಾರ ಚಿತ್ರದ ಸೀಕ್ವೆಲ್ ಬಿಡುಗಡೆ ಆಗಬೇಕಿತ್ತು. ಆದರೆ, ಕರೊನಾದಿಂದ ಚಿತ್ರ ನಿರ್ಮಾಣ ಸಂಸ್ಥೆ ಡಿಸ್ನಿ, ರಿಲೀಸ್​ ದಿನಾಂಕವನ್ನು ಮುಂದೂಡುತ್ತಲೇ ಬಂದಿದೆ. ಇದೀಗ ಚಿತ್ರತಂಡವೇ ಹೇಳಿಕೊಂಡಿರುವ ಪ್ರಕಾರ 2022ಕ್ಕೆ ಸಿನಿಮಾ ರಿಲೀಸ್​ ಆಗಲಿದೆಯಂತೆ.

ಕೇವಲ ಅವತಾರ ಸೀಕ್ವೆಲ್​ ಅಷ್ಟೇ ಅಲ್ಲದೆ, ಮುಲಾನ್​ ಮತ್ತು ಸ್ಟಾರ್​ ವಾರ್ಸ್ ಸಹ ಬಿಡುಗಡೆಯನ್ನು ಮುಂದೂಡಲಾಗಿದೆ. 2022ಕ್ಕೆ ರಿಲೀಸ್​ ಆಗಬೇಕಿದ್ದ ಸ್ಟಾರ್ ವಾರ್ಸ್ 2023ಕ್ಕೆ ಶಿಫ್ಟ್ ಆಗಿದೆ. ಈ ಮೂರು ಸಿನಿಮಾಗಳಿಗೆ ವಿಶ್ವದೆಲ್ಲೆಡೆ ಪ್ರೇಕ್ಷಕರಿದ್ದೂ, ಸದ್ಯ ಕರೊನಾ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ.

2009ರಲ್ಲಿ ಬಿಡುಗಡೆಯಾಗಿದ್ದ ಅವತಾರ ಚಿತ್ರದ ಮೊದಲ ಅವತರಣಿಕೆ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಮಾಡಿತ್ತು. ಅದಾದ ಬಳಿಕ ಸೀಕ್ವೆಲ್​ ಬಗ್ಗೆ ಬಗೆಬಗೆ ಮಾತುಗಳು ಕೇಳಿಬಂದಿದ್ದವಾದರೂ, 2014ರಲ್ಲಿಯೇ ಸೀಕ್ವೆಲ್​ ಬಿಡುಗಡೆಯಾಗಲಿದೆ ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net