

ದಿಶಾ ಪಠಾಣಿಗೆ ತೆಲುಗು ಚಿತ್ರರಂಗ ಹೊಸದಲ್ಲವೇ ಅಲ್ಲ. ದಿಶಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ, ‘ಲೋಫರ್’ ಎಂಬ ತೆಲುಗು ಚಿತ್ರದಿಂದ. ಆ ನಂತರ ಬಾಲಿವುಡ್ನಿಂದ ಅವಕಾಶಗಳು ಬಂದವು. ಸಲ್ಮಾನ್ ಖಾನ್, ಟೈಗರ್ ಶ್ರಾಫ್, ಸಿದ್ಧಾರ್ಥ್ ಮಲ್ಹೋತ್ರಾ ಮುಂತಾದ ಖ್ಯಾತನಾಮರ ಜತೆಗೆ ನಟಿಸುವುದಕ್ಕೆ ಅವಕಾಶ ಸಿಕ್ಕಿತು. ಇದರಿಂದ ದಿಶಾ ಮತ್ತೆ ದಕ್ಷಿಣದತ್ತ ಮುಖ ಮಾಡಲಿಲ್ಲ. ಇದೀಗ ಆಕೆಗೆ ಅಂಥದ್ದೊಂದು ಅವಕಾಶ ಸಿಕ್ಕಿದ್ದು, ಎಲ್ಲ ಅಂದುಕೊಂಡಂತೆ ಆದರೆ, ರಾಮ್ಚರಣ್ ತೇಜ ಅಭಿನಯದ ನಾಯಕಿಯಾಗುವ ಸಾಧ್ಯತೆ ಇದೆ.
ಸದ್ಯ ಶಂಕರ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವ ರಾಮ್ಚರಣ್, ಅದನ್ನು ಮುಗಿಸಿ ಕೊಂಡು ಗೌತಮ್ ತಿನ್ನನೂರಿ ನಿರ್ದೇಶನದ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿದ್ದಾರೆ. ಈ ಚಿತ್ರಕ್ಕೆ ದಿಶಾ ನಾಯಕಿ ಯಾಗುವ ಸಾಧ್ಯತೆ ಇದೆಯಂತೆ. ಈಗಾಗಲೇ ಚಿತ್ರತಂಡದವರು ಒಮ್ಮೆ ಆಕೆಯನ್ನು ಭೇಟಿಯಾಗಿ ಕಥೆ ಹೇಳಿದ್ದಾರಂತೆ. ದಿಶಾ ಹೂಂ ಎಂದರೆ, ಅವರು ರಾಮ್ರಣ್ಗೆ ನಾಯಕಿಯಾಗುತ್ತಾರೆ. ಉಹೂಂ ಎಂದರೆ, ಅವರ ಜಾಗಕ್ಕೆ ಯಾರು ಬರುತ್ತಾರೋ ಗೊತ್ತಿಲ್ಲ? -ಏಜೆನ್ಸೀಸ್