ಒಮ್ಮೆ ಓಕೆ ಅಂದರೆ ಸಾಕು… ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟ ಹಾಟ್​ ಬ್ಯೂಟಿ ಸಾಧಿಕಾ ವೇಣುಗೋಪಾಲ್​

Sadhika Venugopal
Published on

ಚೆನ್ನೈ: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮತ್ತೊಬ್ಬ ನಟಿ ಸಾಧಿಕಾ ವೇಣುಗೋಪಾಲ್​​ ಸೇರಿಕೊಂಡಿದ್ದಾರೆ.

ಸಾಧಿಕಾ ವೇಣುಗೋಪಾಲ್​ ಅವರು ಮಲಯಾಳಂ ನಟಿ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಾಧಿಕಾ, ತಮ್ಮ ಬೋಲ್ಡ್​ ಫೋಟೋಶೂಟ್​ನಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ತಮ್ಮ ಸೋಶಿಯಲ್​ ಮೀಡಿಯಾ ಚಾರ್ಮ್​ನಿಂದಲೇ ತಮ್ಮದೇಯಾದ ಅಭಿಮಾನಿ ಬಳಗವನ್ನು ಸಾಧಿಕಾ ಸೃಷ್ಟಿ ಮಾಡಿಕೊಂಡಿದ್ದಾರೆ. ಇದೀಗ ಚಿತ್ರರಂಗದ ಕೆಲವು ಕರಾಳ ಛಾಯೆಯನ್ನು ಸಾಧಿಕಾ ಬಹಿರಂಗ ಮಾಡಿದ್ದಾರೆ.

ನಾನು ಮಂಚ ಹಂಚಿಕೊಳ್ಳಲು ಓಕೆ ಅಂದರೆ ಪ್ರಮುಖ ನಾಯಕಿ ಪಾತ್ರವನ್ನು ನೀಡುವುದಾಗಿ ಅನೇಕರು ನನಗೆ ಆಫರ್‌ಗಳನ್ನು ನೀಡಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಅಥವಾ ನಿರ್ದೇಶಕರಿಗೆ ತಿಳಿದಿಲ್ಲದಿರಬಹುದು ಆದರೆ ಉದ್ಯಮದಲ್ಲಿ ಕೆಲವು ನಡೆಯುವುದೇ ಹೀಗೆ ಎಂದು ಸಾಧಿಕಾ ಬಹಿರಂಗಪಡಿಸಿದ್ದಾರೆ.

ಇಂತಹ ಹೆಚ್ಚಿನ ಕರೆಗಳು ಸಿನಿಮಾ ರಂಗದ ಮಧ್ಯವರ್ತಿಗಳಿಂದಲೇ ಬರುತ್ತವೆ. ನಾನು ಯಾರಾದರೂ ಒಬ್ಬರಿಗೆ ಹೌದು ಎಂದು ಹೇಳಿದರೆ ಸಾಕು ನಾನು ಎಂದಿಗೂ ಈ ಕಾಸ್ಟಿಂಗ್​ ಕೌಚ್​ ಹಳ್ಳದಿಂದ ಹೊರಬರಲು ಸಾಧ್ಯವಿಲ್ಲ. ಏಕೆಂದರೆ ನನ್ನಷ್ಟಕ್ಕೆ ನಾನು ದುರ್ಬಲ ಎಂದು ಪರಿಗಣಿಸುತ್ತೇನೆ ಮತ್ತು ಯಾವುದೇ ಪಾತ್ರಕ್ಕಾಗಿ ಯಾವಾಗಲೂ ರಾಜಿ ಮಾಡಿಕೊಳ್ಳಲು ಸಿದ್ಧಳಾಗಿಬಿಡುತ್ತೇನೆ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಯಾವಾಗಲೂ ಇಂತಹ ಆಫರ್​ಗಳಿಗೆ ನೋ ಎಂದು ಹೇಳುತ್ತೇನೆ ಎಂದು ಸಾಧಿಕಾ ತಿಳಿಸಿದರು.

ಕೆಲವು ನಟಿಯರು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಸಿನಿಮಾ ವ್ಯಕ್ತಿಗಳ ಅನೇಕ ಹೆಸರುಗಳನ್ನು ಬಹಿರಂಗಪಡಿಸುವುದರಿಂದ ಕೆಲವರು ನನ್ನನ್ನು ಸಂಪರ್ಕಿಸಲು ಭಯಪಡುತ್ತಾರೆ. ನಾನು ಕೂಡ ಜಾಲತಾಣದಲ್ಲಿ ಪ್ರಸ್ತಾಪ ಮಾಡುತ್ತೇಬೆ ಎಂಬ ಭಯದಿಂದ ನನ್ನನ್ನು ಸಂಪರ್ಕಿಸಲು ಎದುರಾತ್ತಾರೆ. ಈ ಕಾರಣದಿಂದ ನಾನು ಅನೇಕ ಪಾತ್ರಗಳನ್ನು ಕಳೆದುಕೊಂಡಿದ್ದೇನೆ ಎಂದರು.

ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ನಾನು ಯಾರನ್ನೂ ಕೀಳಾಗಿ ಕಾಣಲು ಬಯಸುವ ವ್ಯಕ್ತಿಯಲ್ಲ. ನನಗೆ ಇಂತಹ ಆಫರ್​ಗಳನ್ನು ಪ್ರಸ್ತಾಪ ಮಾಡಲು ನನ್ನ ಬೋಲ್ಡ್​ ಫೋಟೋಶೂಟ್‌ಗಳು ಕಾರಣ ಇರಬಹುದು. ಈ ಬಗ್ಗೆ ಖಚಿತವಾಗಿ ಹೇಳುವುದೇನೆಂದರೆ, ದಯವಿಟ್ಟು ನನ್ನ ಫೋಟೋಶೂಟ್‌ಗಳಿಂದ ನನ್ನನ್ನು ಈ ರೀತಿಐಆಗಿ ನಿರ್ಣಯಿಸಬೇಡಿ. ನಾನು ವಿಭಿನ್ನ ವ್ಯಕ್ತಿ ಎಂದು ಸಾಧಿಕಾ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net