

ಬೆಂಗಳೂರು: ನಿರ್ದೇಶಕರá--ನಿರ್ವಪಕರಿಗೆ ಅನುಕೂಲವಾಗಲಿ, ಅವರ ಚಿತ್ರಗಳ ಮಾರಾಟಕ್ಕೆ ಒಂದು ವೇದಿಕೆಯಾಗಲಿ ಎಂಬ ಉದ್ದೇಶದಿಂದ ನಿರ್ದೇಶಕರ ಸಂಘ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಡೈರೆಕ್ಟರ್ಸ್ ಫಿಲಂ ಬಜಾರ್’ ಆರಂಭಿಸುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್, ‘ಕನ್ನಡ ಚಿತ್ರಗಳಿಗೆ ವಿಶ್ವ ಮಾರುಕಟ್ಟೆ ಕಲ್ಪಿಸಲು ಈ ಫಿಲಂ ಬಜಾರ್ ಆರಂಭಿಸುತ್ತಿದ್ದೇವೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ವಿವಿಧ ಸಿನಿಮಾ ಮಾರುಕಟ್ಟೆ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿವೆ. ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ವಪಕರು, ವಿತರಕರು, ಪ್ರದರ್ಶಕರು, ಕಲಾವಿದರು, ತಂತ್ರಜ್ಞರು ಇದರ ಪ್ರಯೋಜನ ಪಡೆಯಬಹುದು’ ಎಂದರು.
‘ಸಿನಿಮಾಗಳನ್ನು ಮಾಡುವ ಜತೆಗೆ ಅದರ ಮಾರಾಟದ ಬಗ್ಗೆಯೂ ಎಲ್ಲರಿಗೆ ಅರಿವಿರಬೇಕು ಎಂದು ಈ ಆಲೋಚನೆ ಮಾಡಲಾಗಿದೆ. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ಒರಾಯನ್ ಮಾಲ್ನ ಗೋಲ್ಡ್ ಕ್ಲಾಸ್ನಲ್ಲಿ 8 ಸೆಷನ್ಸ್ ಮೂಲಕ ಮಾರುಕಟ್ಟೆ ಬಗ್ಗೆ ಅರಿವು ಮೂಡಿಸುತ್ತೇವೆ. ಈಗಾಗಲೇ 150 ನಿರ್ವಪಕರು ನೋಂದಣಿ ಮಾಡಿಕೊಂಡಿದ್ದಾರೆ. ಸಿನಿಮಾಗಳಲ್ಲಿ 159 ರೀತಿಯ ರೈಟ್ಸ್ ಇರುತ್ತವೆ. ಯಾರೇ ನಿರ್ದೇಶಕರು, ನಿರ್ವಪಕರನ್ನು ಕರೆದುಕೊಂಡು ಬಂದರೆ ಅವರಿಗೆ ಈ ಫಿಲಂ ಬಜಾರ್ನಲ್ಲಿ ಅರಿವು ಮೂಡಿಸುತ್ತೇವೆ’ ಎಂದು ಅವರು ತಿಳಿಸಿದರು.