

ಹೈದರಾಬಾದ್: ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ನಿರ್ದೇಶಕ, ನಿರ್ಮಾಪಕ ಯಾರೆಂದರೆ ಅದು ಒನ್ ಅಂಡ್ ಓನ್ಲಿ ರಾಮ್ ಗೋಪಾಲ್ ವರ್ಮಾ.
ಹೌದು, ವರ್ಮಾ ಸದಾ ಒಂದಿಲ್ಲ ಒಂದು ಹೇಳಿಕೆ ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಟ್ವಿಟ್ಟರ್ನಲ್ಲಿ ಸಕ್ರಿಯವಾಗಿರುವ ಅವರು ತಮ್ಮ ಭಿನ್ನ ಟ್ವೀಟ್ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಅವರಿಗೆ ಟ್ವಿಟ್ಟರ್ನಲ್ಲಿ 4.7 ಮಿಲಿಯನ್ ಹಿಂಬಾಲಕರಿದ್ದಾರೆ.
ದೇಶದಲ್ಲಿ ಇಂದು ಹಿಂದೂಗಳು ಸಂಭ್ರಮದಿಂದ ಶಿವರಾತ್ರಿ ಆಚರಿಸುತ್ತಿದ್ದಾರೆ. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರಾಮ್ ಗೋಪಾಲ್ ವರ್ಮಾ ತಾವೇ ಶಿವನ ಅವತಾರ ಎತ್ತಿರುವಂತೆ ಫೋಟೊ ಹಾಕಿ Wish you all a very very Unhappy ShivaRatri ! If the below picture reminds you of anyone you hate, it’s just a coincidentally incidental accident ! Hail Lord Shiva! (ನಿಮ್ಮೆಲ್ಲರಿಗೂ ಅತೃಪ್ತಿಯ ಶಿವರಾತ್ರಿಯ ಶುಭಾಶಯಗಳು. ನೀವು ದ್ವೇಷಿಸುವ ವ್ಯಕ್ತಿ ಈ ಫೋಟೊದಲ್ಲಿದ್ದರೆ ಅದು ಕಾಕತಾಳೀಯವಷ್ಟೇ, ಶಿವನಿಗೆ ನಮಸ್ಕಾರ) ಎಂದು ಟ್ವೀಟ್ ಮಾಡಿದ್ದಾರೆ.
ಅವರು ಹಾಕಿರುವ ಫೋಟೊ ನಗು ಉಕ್ಕಿಸುವಂತಿದೆ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ವರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.