ಇದೇ ತಿಂಗಳಲ್ಲಿ ‘ಆರ್​​ಆರ್​ಆರ್​’ ಚಿತ್ರದಿಂದ ಬಿಗ್ ಸರ್ಪೈಸ್​​...

RRR
Published on

ಹೈದರಾಬಾದ್​: ದೇಶಾದ್ಯಂತ ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ, ಬೇರೆಬೇರೆ ಭಾಷೆಗಳಲ್ಲಿ ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಈಗಾಗಲೇ ಮುಂಬೈನಲ್ಲಿ ಕೆಲವು ಹಿಂದಿ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದೆ. ಈಗ ಟಾಲಿವುಡ್​ನಲ್ಲೂ ಚಿತ್ರೀಕರಣ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ. ಹೀಗಿರುವಾಗಲೇ ಬಾಕಿ ಉಳಿದಿರುವ ಶೂಟಿಂಗ್​ ಮಾಡಿಕೊಳ್ಳಲು ಜುಲೈ 1ರಿಂದ ಆರ್​ಆರ್​ಆರ್​ ತಂಡ ಪ್ಲಾನ್ ಮಾಡಿದೆ. ಜತೆಗೆ ಸಿನಿಮಾ ಪ್ರೇಮಿಗಳಿಗೆ ಬಿಗ್ ಸರ್ಪೈಸ್​​ ಸಹ ನೀಡಲಿದ್ದಾರಂತೆ ರಾಜಮೌಳಿ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅಕ್ಟೋಬರ್ 13ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕ ಯಾವಾಗ ಎಂಬುದು ಸದ್ಯಕ್ಕೆ ಅಧಿಕೃತವಾಗಿಲ್ಲ. ಈ ನಡುವೆ, 2022ರ ಏಪ್ರಿಲ್​ನಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ.

ಅಂದಹಾಗೆ ಜುಲೈ ವೇಳೆಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಲಿದೆ. ಪ್ರೇಕ್ಷಕರಿಗೂ ಸರ್ಪೈಸ್ ನೀಡಲು ರಾಜಮೌಳಿ ನಿರ್ಧರಿಸಿದ್ದಾರೆ. ಇನ್ನೇನು ಶೀಘ್ರದಲ್ಲಿ ಇದೇ ತಿಂಗಳೊಳಗೆ ನೂತನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ. ಜ್ಯೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ಸೇರಿ ಹಲವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net