ರಿಚರ್ಡ್​ ಆಂಟನಿ ಸಿನಿಮಾ ಬಗ್ಗೆ, ರಕ್ಷಿತ್​ ಶೆಟ್ಟಿ ಎಲ್ಲಿದ್ದಾರೆ ಎಂದು ಗೆಳೆಯ, ನಿರ್ದೇಶಕ ಹೇಮಂತ್ ರಾವ್ ಹೇಳಿದ್ದಿಷ್ಟು..Rakshit Shetty Richard Antony

  Hemanth Rao gave Update on Rakshit Shettys Richard Antony Movie
Hemanth Rao gave Update on Rakshit Shettys Richard Antony Movie
Published on
  Hemanth Rao gave Update on Rakshit Shettys Richard Antony Movie : ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ  ರಿಲೀಸ್​​ ಆಗಿ ಸಕ್ಸಸ್​ ಕಂಡ ನಂತರ ಕಾಣೆಯಾದ ರಕ್ಷಿತ್​ ಶೆಟ್ಟಿ ಕಳೆದ ಕೆಲವು ದಿನದ ಹಿಂದೆ  ಪೋಷಕರ ವಿವಾಹ ವಾರ್ಷಿಕೋತ್ಸವದಂದು ಕಾಣಿಸಿಕೊಂಡಿದ್ದರಷ್ಟೇ ಮತ್ತೆ ಮಾಯಾವಾಗಿರೋ ಅವರು ಇರೋದಾದ್ರು ಎಲ್ಲಿ. ಅವರ ಮುಂದಿನ ಸಿನಿಮಾ ಯಾವುದು? ಯಾವಾಗ ಮತ್ತೆ  ಎಲ್ಲರಿಗೂ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಹಲವರಲ್ಲಿ ಕಾಡುತ್ತಿರುವ ಪ್ರಶ್ನೆ. 

ಎಲ್ಲಿದ್ದಾರೆ ರಕ್ಷಿತ್​ ಶೆಟ್ಟಿ

ಸದ್ಯ ಆ ಬಗ್ಗೆ ಅವರ ಗೆಳೆಯ ಹಾಗೂ ಸ್ಟಾರ್ ನಿರ್ದೇಶಕ ಹೇಮಂತ್ ರಾವ್ ಮಾತನಾಡಿದ್ದು, ರಕ್ಷಿತ್​ ಶೆಟ್ಟಿ ಎಲ್ಲಿದ್ದಾರೆ. ಏನ್​ ಮಾಡ್ತಿದ್ದಾರೆ ಎನ್ನುವ ಬಗ್ಗೆ  ಪಾಡ್​ಕಾಸ್ಟ್​ವೊಂದರಲ್ಲಿ ಮಾತನಾಡಿದ್ದಾರೆ.  'ರಕ್ಷಿತ್​ ಶೆಟ್ಟಿ ಒಬ್ಬ ಅದ್ಭುತ ನಟ.  ಅವರ ಸಿನಿಮಾ ಮತ್ತು ಎಮೋಷನ್​ಗಳ ಮೇಲಿರುವ ಸ್ಕೇಲ್​ ಬೇರೆಯದ್ದೇ . ಮುಂದಿನ ಸಿನಿಮಾಕ್ಕೆ ಸದ್ಯ ರಕ್ಷಿತ್​​  ರೆಡಿಯಾಗ್ತಿದ್ದಾರೆ. ಅವರು ಎಲ್ಲಿಯೂ ಕಾಣಿಸಿಕೊಳ್ಳದೇ ಇರುವುದು ರಿಚರ್ಡ್​ ಆಂಟನಿ ಸಿನಿಮಾಗೆ ಸಿಗುತ್ತಿರುವ ಬೆಸ್ಟ್​ ಮಾರ್ಕೆಟಿಂಗ್ ಇಷ್ಟು ಜನ ಕಾಯ್ತಿದ್ದಾರೆ ಎಂದರೆ, ರಿಚರ್ಡ್​ ಆಂಟನಿ ಸಿನಿಮಾ ಹೇಗಿರುತ್ತೆ ಅನ್ನೋದನ್ನ ಊಹೆ ಮಾಡಿಕೊಳ್ಳಿ' ​ಎಂದು ಹೇಳಿದ್ದಾರೆ.

ಅಜನೀಶ್ ಲೋಕನಾಥ್  ಹೇಳಿದ್ದೇನು

ಇತ್ತೀಚೆಗೆ  ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರಿಚರ್ಡ್​ ಆಂಟನಿ ಸಿನಿಮಾ ಅರ್ಧಕ್ಕೆ ನಿಂತಿದೆ ಎನ್ನುವ ಊಹಾಪೋಹಕ್ಕೆ ಬ್ರೇಕ್​  ಹಾಕಿದ್ದರು. ರಿಚರ್ಡ್​ ಆಂಟನಿ ಸಿನಿಮಾಕ್ಕೆ ನಾನು ರೆಡಿಯಾಗಿದ್ದೇನೆ. ರಕ್ಷಿತ್​ ಶೆಟ್ಟಿ ಕೂಡ ರೆಡಿಯಾಗಿದ್ದಾರೆ. ಇಡೀ ಸಿನಿಮಾ ತಂಡ ಶೂಂಟಿಗ್​ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ದಿನ ಇನ್ನೇನು ಸಮೀಪದಲ್ಲಿದೆ ಎಂದು ಅಜನೀಶ್​ ಹೇಳಿದ್ದರು. 

ಪೋಷಕರ ವಿವಾಹ ವಾರ್ಷಿಕೋತ್ಸವದಲ್ಲಿ ಕಾಣಿಸಿಕೊಂಡಿದ್ದ ರಕ್ಷಿತ್

ನಟ ಮತ್ತು ನಿರ್ದೇಶಕ ರಕ್ಷಿತ್​ ಶೆಟ್ಟಿ ಕಾಣೆಯಾಗಿದ್ದಾರೆ ಎನ್ನುವ ಹೊತ್ತಲ್ಲೇ  ಉಡುಪಿಯ ದೇಗುಲವೊಂದರಲ್ಲಿ ಪೋಷಕರ ವಿವಾಹ ವಾರ್ಷಿಕೋತ್ಸವದಂದು ಕಾಣಿಸಿಕೊಂಡಿದ್ದರು. ಪಂಚೆ, ಕುರ್ತಾ ತೊಟ್ಟು ಮದುಮಗನಂತೆ ಕಾಣಿಸಿಕೊಂಡಿದ್ದರು. ಆ ನಂತರ ಮತ್ತೆ ಕಾಣೆಯಾಗಿದ್ದಾರೆ.  
ರಿಚರ್ಡ್​ ಆಂಟನಿ ರಕ್ಷಿತ್​ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​​​ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಇದೊಂದು ಆಕ್ಷನ್​ ಥ್ರಿಲ್ಲರ್​ ಸಿನಿಮಾವಾಗಿದ್ದು, ಬಿ ಅಜನೀಶ್​ ಲೋಕನಾಥ್​​​​ ಸಿನಿಮಾಗೆ ಸಂಗೀತ ಸಂಯೋಜಿಸಲಿದ್ದಾರೆ.

ಹೇಮಂತ್​ ರಾವ್​ ಯಾರು?

ಹೇಮಂತ್​ ರಾವ್​ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಸಪ್ತಸಾಗರದಾಚೆ ಎಲ್ಲೋ ಸಿನಿಮಾಗಳನ್ನು ನಿರ್ದೇಶಿ ಸಾಕಷ್ಟು ಹಿಟ್​ ಕಂಡ  ನಿರ್ದೇಶಕ. ಕವಲುದಾರಿ (2019), ಅಜ್ಞಾತವಾಸಿ (2025) ಸಿನಿಮಾಗಳು ಕನ್ನಡ ಸಿನಿಮಾ ರಂಗದಲ್ಲಿ ಹೊಸತನವನ್ನೇ ನಿರ್ಮಾಣ ಮಾಡಿತ್ತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net