

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ದಿಗಂತ್, ಶರ್ಮಿಳಾ ಮಾಂಡ್ರೆ, ಧನ್ಯಾ ರಾಮಕುಮಾರ್ ಮತ್ತು ಅನಿರುದ್ಧ್ ಆಚಾರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಗುಳ್ಟೂ' ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ನಿರ್ದೇಶಿಸಿರುವ ಸಿನಿಮಾ "ಪೌಡರ್'. ನಾಲ್ವರು ಗೆಳೆಯರಿಗೆ ಡ್ರಗ್ಸ್ ಪ್ಯಾಕೇಜ್ ಸಿಕ್ಕಿ, ಅದರಿಂದ ಶ್ರೀಮಂತರಾಗಲು ಪ್ಲಾ$್ಯನ್ ಮಾಡುತ್ತಾರೆ. ಅವರು ಹಣ ಗಳಿಸುತ್ತಾರಾ? ಅಥವಾ ಸಮಸ್ಯೆಗೆ ಸಿಲುಕುತ್ತಾರಾ? ಎಂಬುದರ ಸುತ್ತ "ಪೌಡರ್' ಕಥೆ ಸಾಗುತ್ತದೆ. ನಾಯಕ ದಿಗಂತ್, "ಇದು ಒಳ್ಳೆ ಕಾಮಿಡಿ ಸಿನಿಮಾ. ಪ್ರೇಕ್ಷಕರಿಗೆ ಭರಪೂರ್ತಿ ಮನರಂಜನೆ ನೀಡಲಿದೆ' ಎಂದರು. ಅವರಿಗೆ ಧ್ವನಿಗೂಡಿಸಿದ ಶರ್ಮಿಳಾ ಮತ್ತು ಧನ್ಯಾ, "ಸಿನಿಮಾ ಚೆನ್ನಾಗಿ ಮೂಡಿಬಂದಿದೆ. 131 ನಿಮಿಷ ಥಿಯೇಟರ್ಗಳಲ್ಲಿ ಕುಳಿತು ನಕ್ಕು ಸಂಭ್ರಮಿಸುವ ಚಿತ್ರವಿದು' ಎಂದು ಹೇಳಿಕೊಂಡರು.
""ಛೋಟಾ ಭೀಮ್' ಆ್ಯನಿಮೇಷನ್ ಮಾಡಿರುವ ಗ್ರೀನ್ ಬೋಲ್ಡ್ ಸಂಸ್ಥೆ ಚಿತ್ರಕ್ಕಾಗಿ ಒಂದು ನಿಮಿಷ ಆ್ಯನಿಮೇಷನ್ ಮಾಡಿಕೊಟ್ಟಿದೆ. ಹಾಗೇ ನಟ ಜಗ್ಗೇಶ್ ನರೇಷನ್ ಕೂಡ ಅಲ್ಲಲ್ಲಿ ನಗಿಸುತ್ತದೆ. ಮೊದಲು "ಕ್ಯೂಟಿಕುರಾ', "ಟ್ಯಾಲ್ಕಮ್ ಪೌಡರ್' ಅಂತೆಲ್ಲ ಟೈಟಲ್ ಪ್ಲಾ$್ಯನ್ ಮಾಡಿದ್ದೆವು. ಆದರೆ, "ಪೌಡರ್' ಕಥೆಗೆ ಸೂಕ್ತ ಅಂತನ್ನಿಸಿ ಈ ಟೈಟಲ್ ಫಿಕ್ಸ್ ಮಾಡಿದೆವು' ಎಂದು ಮಾಹಿತಿ ನೀಡುತ್ತಾರೆ ನಿರ್ಮಾಪಕ ಕಾರ್ತಿಕ್ ಗೌಡ. ಇತ್ತೀಚೆಗಷ್ಟೆ "ಪೌಡರ್' ಚಿತ್ರದ ಪ್ರಿ&ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ದುನಿಯಾ ವಿಜಯ್, ಶ್ರೀಮುರಳಿ, ದಾನಿಷ್ ಸೇಠ್, ಐಂದ್ರಿತಾ ರೇ, ನಿರ್ದೇಶಕ ರೋಹಿತ್ ಪದಕಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಹಾರೈಸಿದರು. "ಪೌಡರ್' ಇದೇ ಶುಕ್ರವಾರ (ಆ. 23) ರಾಜ್ಯಾದ್ಯಂತ ತೆರೆಗೆ ಬರಲಿದೆ.
ಟಿಕೆಟ್ ದರ ಕಡಿತ
ಕೆಲವು ತಿಂಗಳಿಂದ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಬರುತ್ತಿಲ್ಲ, ಹೀಗಾಗಿ ಕನ್ನಡ ಸಿನಿಮಾ ಮತ್ತು ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ ಎಂಬ ಮಾತಿದೆ. ಆ ಕಷ್ಟ ನಿವಾರಣೆಗಾಗಿಯೇ ಇತ್ತೀಚೆಗಷ್ಟೆ ಕಲಾವಿದರ ಸಂದ ವತಿಯಿಂದ ಹೋಮ, ವಿಶೇಷ ಪೂಜೆಯನ್ನೂ ಆಯೋಜಿಸಲಾಗಿತ್ತು. ಇದೀಗ ಪ್ರೇಕ್ಷಕರನ್ನು ಸೆಳೆಯಲು "ಪೌಡರ್' ತಂಡ ಹೊಸ ಐಡಿಯಾ ಮಾಡಿದೆ. ಮಲ್ಟಿಪ್ಲೆಕ್ಸ್ಗಳಲ್ಲೂ ಟಿಕೆಟ್ ದರವನ್ನು 150 ರೂ.ನಿಂದ 180 ರೂ.ವರೆಗೆ ನಿಗದಿಪಡಿಸಲಾಗಿದೆ. ಗೋಲ್ಡ್ ಕ್ಲಾಸ್ ಮತ್ತು ಪ್ರೀಮಿಯಂ ಸೀಟುಗಳಿಗೆ ಇದು ಅನ್ವಯಿಸುವುದಿಲ್ಲ.