ಎಣ್ಣೆ ಮತ್ತಿನಲ್ಲಿ ಶ್ರೀದೇವಿ ಕೋಣೆಗೆ ಸಂಜಯ್​ ದತ್​ ಎಂಟ್ರಿ; ಮುಂದಾಗಿದ್ದೇ ಬೇರೆ?

1-1
Published on

ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಲೇಡಿ ಸೂಪರ್​ಸ್ಟಾರ್​ ಎಂದೇ ಗುರುತಿಸಿಕೊಂಡಿದ್ದ ನಟಿ ಶ್ರೀದೇವಿ, 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಸ್ಟಾರ್ ಹೀರೋಗಳ ಜತೆ ಸ್ಕ್ರೀನ್ ಶೇರ್​ ಮಾಡಿಕೊಂಡಿದ್ದಾರೆ. ಆದರೆ, ಸಂಜಯ್​ ದತ್​ ಜತೆ ನಟಿಸಲು ಮಾತ್ರ ಶ್ರೀದೇವಿಗೆ ತುಂಬ ಭಯ ಕಾಡಿತ್ತಂತೆ. ಆ ಒಂದು ಘಟನೆಯನ್ನು ಸಂಜಯ್​ ದತ್ ಇತ್ತೀಚೆಗಷ್ಟೇ ನೆನಪು ಮಾಡಿಕೊಂಡಿದ್ದರು.

ಹೌದು, 1983ರ ಸುಮಾರಿಗೆ ಜಿತೇಂದ್ರ ಜತೆ ಹಿಮ್ಮತ್​ವಾಲಾ ಸಿನಿಮಾದಲ್ಲಿ ಶ್ರೀದೇವಿ ನಾಯಕಿ. ಆ ಚಿತ್ರದ ಶೂಟಿಂಗ್​ ನೋಡಲು ಸಂಜಯ್​ ದತ್​ ಸಹ ಆಗಮಿಸಿದ್ದರಂತೆ. ಅಷ್ಟೇ ಅಲ್ಲ ಶೂಟಿಂಗ್​ ಮುಗಿಯುತ್ತಿದ್ದಂತೆ, ಎಣ್ಣೆ ಮತ್ತಿನಲ್ಲಿ ನೇರವಾಗಿ ಶ್ರೀದೇವಿ ಕೋಣೆಯ ಬಾಗಿಲು ತಟ್ಟಿ ಅವರನ್ನು ಎಬ್ಬಿಸಿದ್ದರಂತೆ. ಕೋಣೆ ಒಳಗೆ ಬರಲು ಪ್ರಯತ್ನಿಸುತ್ತಿದ್ದಂತೆ ಕೋಣೆಯ ಬಾಗಿಲು ಹಾಕಿದ್ದರು ಶ್ರೀದೇವಿ.

ಬಳಿಕ ಸುಮಾರು ವರ್ಷಗಳ ಬಳಿಕ ಇದೇ ಘಟನೆಯನ್ನು ನೆನಪು ಮಾಡಿಕೊಂಡ ಸಂಜಯ್​, ಆವತ್ತು ಕೋಣೆಯಲ್ಲಿ ನನ್ನ ವರ್ತನೆ ಹೇಗಿತ್ತು ಎಂಬುದು ನನಗೇ ಗೊತ್ತಿಲ್ಲ. ಅದರ ನೆನಪೂ ಇಲ್ಲ ಎಂದು ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಈ ಘಟನೆ ಆದ ಬಳಿಕ ಸಂಜಯ್​ ದತ್ ಜತೆ ಸಿನಿಮಾ ಮಾಡುವುದನ್ನೇ ಕೈ ಬಿಟ್ಟಿದ್ದರಂತೆ ಶ್ರೀದೇವಿ.

ಕೊನೆಗೆ ಆ ಘಟನೆ ನಡೆದು 10 ವರ್ಷಗಳ ಬಳಿಕ 1993ರಲ್ಲಿ ಗುಮ್ರಾ ಚಿತ್ರದಲ್ಲಿ ಸಂಜಯ್​ ಮತ್ತು ಶ್ರೀದೇವಿ ನಟಿಸಿದರಾದರೂ, ಚಿತ್ರ ಪ್ಲಾಪ್​ ಪಟ್ಟಿ ಸೇರಿಕೊಂಡಿತು. ಹೀಗೆ ಅಂದಿನ ಒಂದಷ್ಟು ಘಟನೆಗಳನ್ನು ಸಂಜಯ್​ ದತ್​ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net