'ಗಿಲ್ಲಿ' ನಟನ ಜೊತೆ ಮುನಿಸು​? ದಳಪತಿ ಜನ್ಮದಿನಕ್ಕೆ ಶುಭಕೋರದ ಸೌತ್​ ಬ್ಯೂಟಿ, ಅಕೌಂಟ್​ ಅನ್​ಫಾಲೋ

ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್
ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್
Published on

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್ ಜನ್ಮದಿನಕ್ಕೆ ಶುಭಕೋರದ ನಟಿ ತ್ರಿಷಾ ಕೃಷ್ಣನ್
  • ಸೋಷಿಯಲ್ ಮೀಡಿಯಾದಲ್ಲಿ ನಟನನ್ನು ಅನ್​ಫಾಲೋ ಮಾಡಿದ ಬ್ಯೂಟಿ
Trisha Krishnan: ತಮಿಳುನಾಡಿನ ಸಿಎಂ ವಿಜಯ್ ಮತ್ತು ತಮಿಳಿನ ಸ್ಟಾರ್​ ಬ್ಯೂಟಿ, ನಟಿ ತ್ರಿಷಾ ಕೃಷ್ಣನ್​ ನಡುವೆ ಏನೋ ವೈಮನಸ್ಸು ಮೂಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗುಮಾನಿ ಎಬ್ಬಿಸಿವೆ. ಅದಕ್ಕೆ ಪುಷ್ಠಿ ಎನ್ನುವಂತೆ ತ್ರಿಷಾ ವಿಜಯ್​ರನ್ನು ಅನ್​ಫಾಲೋ ಮಾಡಿರುವುದು. ಇದು ಸ್ಟಾರ್​ ಜೋಡಿಯ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ನಟನ ಡಿವೋರ್ಸ್​ ಸುದ್ದಿ ಹೊರಬಿದ್ದಾಗಿನಿಂದ ತ್ರಿಷಾ ಹೆಸರು ಪದೇ ಪದೇ ಸದ್ದು ಮಾಡುತ್ತಿದೆ. ವಿಜಯ್ ದಾಂಪತ್ಯ ಜೀವನ ಮುರಿದುಬೀಳಲು ನಟಿಯೇ ಕಾರಣ ಎಂಬ ಊಹಾಪೋಹಗಳು ಜಾಲತಾಣಗಳಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದೆ. ಅದು ವಿಜಯ್​ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವ ಸಮಯದಲ್ಲೇ. ಕಾಂಟ್ರೋವರ್ಸಿಗಳ ನಡುವೆಯೇ ದಾಖಲೆಯ ಗೆಲುವು ಸಾಧಿಸಿದ ದಳಪತಿ, ತಮಿಳುನಾಡಿನ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಅಂದು ನಟನ ಪ್ರಮಾಣವಚನಕ್ಕೆ ಆಗಮಿಸಿದ್ದ ಬ್ಯೂಟಿ ಈಗ ವಿಜಯ್​ ಹುಟ್ಟುಹಬ್ಬಕ್ಕೆ ಶುಭಕೋರದೆ ಇರುವುದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಜೂನ್​ 22ರಂದು ವಿಜಯ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ರಾಜಕೀಯ ಗಣ್ಯರು, ಚಿತ್ರರಂಗದ ಸೆಲೆಬ್ರಿಟಿಗಳು ಮತ್ತು ನಟನ ಅಭಿಮಾನಿಗಳು ನೇರವಾಗಿ ಮತ್ತು ಜಾಲತಾಣಗಳಲ್ಲಿ ಶುಭ ಹಾರೈಸಿದರು. ಆದರೆ, ಫ್ಯಾನ್ಸ್ ಬಹಳ ಕಾತರದಿಂದ ಕಾಯುತ್ತಿದ್ದದ್ದು ನಟಿ ತ್ರಿಷಾ ಪೋಸ್ಟ್​ಗೆ. ಕಾರಣ, ಕಳೆದ ಮೂರು ವರ್ಷಗಳಿಂದ ವಿಜಯ್​ ಜೊತೆಗಿನ ಫೋಟೋಗಳನ್ನು ಪೋಸ್ಟ್​ ಮಾಡುತ್ತಾ, ವಿಶ್​ ಮಾಡುತ್ತಿದ್ದ ಸೌತ್ ಬ್ಯೂಟಿ, ಈ ಬಾರಿಯ ದಳಪತಿ ಹುಟ್ಟುಹಬ್ಬಕ್ಕೆ ಫೋಟೋ ಇರಲಿ, ಸಿಂಪಲ್​ ಆಗಿಯೂ ಶಭಾಶಯ ಹೇಳಿಲ್ಲ.
ನಟಿಯ ಈ ನಡೆ ನೆಟ್ಟಿಗರಲ್ಲಿ, ಇವರಿಬ್ಬರ ನಡುವೆ ಏನೋ ಮನಸ್ತಾಪ, ಬಿರುಕು ಮೂಡಿರಬಹುದು ಎಂಬ ಅನುಮಾನಗಳಿಗೆ ಕಾರಣವಾಗಿದೆ. ತಮ್ಮ ಬಹುಕಾಲದ ಸ್ನೇಹ ಸಂಬಂಧಕ್ಕೆ ಬಹುಶಃ ಈ ಮೂಲಕ ತ್ರಿಷಾ ಫುಲ್​ಸ್ಟಾಪ್​ ಹಾಕಿರಬಹುದು ಎಂಬುದು ನೆಟ್ಟಿಗರ ಅನಿಸಿಕೆ. ಈ ವಿಚಾರದಲ್ಲಿ ಸಕ್ರಿಯರಾಗಿರುವ ಒಂದಷ್ಟು ಅಭಿಮಾನಿಗಳು, ತಮಗೆ ಅನಿಸಿದಂತೆ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ಪ್ರಸ್ತುತ, ಕಾಲಿವುಡ್​ನಲ್ಲಿ ಇದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದು, ಮತ್ತೊಂದೆಡೆ ವಿಜಯ್​ ಮತ್ತು ಸಂಗೀತಾ ಒಂದಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net