

ಬೆಂಗಳೂರು: ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡು, ವಿಮರ್ಶೆ ದೃಷ್ಟಿಯಿಂದಲೂ ಅಪಾರ ಮೆಚ್ಚುಗೆ ಪಡೆದ ‘ದಿಯಾ’, ಅಮೆಜಾನ್ ಪ್ರೖೆಮ್ಲ್ಲೂ ಎಲ್ಲರನ್ನು ಆಕರ್ಷಿಸಿದೆ. ಕನ್ನಡಿಗರ ಜತೆಗೆ ಪರಭಾಷಿಕರನ್ನೂ ಸೆಳೆದಿದೆ. ಇದೀಗ ಇದೇ ಸಿನಿಮಾ ಟಾಲಿವುಡ್ನಲ್ಲಿ ಸದ್ದು ಮಾಡುತ್ತಿದೆ. ಹಾಗಾದರೆ, ತೆಲುಗಿನಲ್ಲಿ ರಿಮೇಕ್ ಆಗಲಿದೆಯೇ ‘ದಿಯಾ’ ಸಿನಿಮಾ? ಎಂಬ ಪ್ರಶ್ನೆ ಬರಬಹುದು. ರಿಮೇಕ್ ಅಲ್ಲ, ಡಬ್ ಆಗಲಿದೆ ಎಂಬುದು ನಿಮ್ಮ ಗಮನಕ್ಕಿರಲಿ. ಹೌದು, ಕೆ.ಎಸ್. ಅಶೋಕ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ದಿಯಾ’ ಚಿತ್ರಕ್ಕೆ ಟಾಲಿವುಡ್ನಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಸಿನಿಮಾ ಹಕ್ಕುಗಳನ್ನು ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರಂತೆ. ಹೀಗಿರುವಾಗಲೇ ಇದೇ ಚಿತ್ರ ರಿಮೇಕ್ ಆಗುವ ಬದಲು ತೆಲುಗು ಭಾಷೆಗೆ ಡಬ್ ಆಗಿ ತೆರೆಕಾಣಲಿದೆಯಂತೆ. ಈಗಾಗಲೇ ಅಮೆರಿಕ ಮೂಲದ ತೆಲುಗು ಸಿನಿಮಾ ವಿತರಕರೊಬ್ಬರು ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವ ಪ್ಲಾ್ಯನ್ ಹಾಕಿದ್ದಾರೆ. ಸದ್ಯಕ್ಕೆ ಒಂದು ಹಂತದ ಮಾತುಕತೆ ನಡೆದಿದ್ದು, ಅಧಿಕೃತ ಘೊಷಣೆಯೊಂದು ಬಾಕಿ ಇದೆ. ಅಶೋಕ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ, ಖುಷಿ ಮುಖ್ಯಭೂಮಿಕೆ ನಿಭಾಯಿಸಿದ್ದರು.