ಆಂಜನೇಯನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಧ್ರುವ

Dhruva Final
Published on

ಧ್ರುವ ಸರ್ಜಾ ಅಪ್ಪಟ ಆಂಜನೇಯನ ಭಕ್ತ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಅವರು ಹಲವು ಸಂದರ್ಶನಗಳಲ್ಲಿ ತಾವು ಆಂಜನೇಯನ ಪರಮ ಭಕ್ತ ಎಂದು ಹೇಳಿಕೊಂಡಿರುವುದರ ಜತೆಗೆ, ಅವಕಾಶ ಸಿಕ್ಕಾಗಲೆಲ್ಲಾ ತಾವು ಹನುಮನ ಭಕ್ತ ಎಂದು ತೋರಿಸುತ್ತಲೇ ಬಂದಿದ್ದಾರೆ.

ಈಗ್ಯಾಕೆ ಈ ವಿಷಯ ಎಂದರೆ, ಇಂದು ಹನುಮ ಜಯಂತಿ. ಈ ಸಂದರ್ಭದಲ್ಲಿ ಧ್ರುವ, ಆಂಜನೇಯನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ದಿ ಬಾಸ್ ... ಹುಟ್ಟುಹಬ್ಬದ ಶುಭಾಶಯಗಳು ಆಂಜನೇಯ ಸ್ವಾಮಿಗೆ ...’ ಎಂದು ಹೇಳಿದ್ದಾರೆ. ಜತೆಗೊಂದು ಕಾರ್ಟೂನ್ ಸಹ ಹಾಕಿದ್ದಾರೆ. ಸ್ಪೈಡರ್‌ಮ್ಯಾನ್, ಬ್ಯಾಟ್‌ಮ್ಯಾನ್, ಸೂಪರ್‌ಮ್ಯಾನ್, ಹಲ್ಕ್ ಮುಂತಾದವರೆಲ್ಲಾ ಆಂಜನೇಯನಿಗೆ ನಮಸ್ಕಾರ ಮಾಡುತ್ತಿದ್ದು, ಆಂಜನೇಯ ಅವರಿಗೆಲ್ಲಾ ಆಶೀರ್ವಾದ ಮಾಡುತ್ತಿರುವ ಈ ಕಾರ್ಟೂನ್‌ಗೆ ‘ದಿ ಗಾಡ್ ಆ್ ಆಲ್ ಸೂಪರ್ ಹೀರೋಸ್ ...’ ಎಂಬ ಶೀರ್ಷಿಕೆ ಸಹ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net