ಮತ್ತಷ್ಟು ಹುರಿಗಟ್ಟುತ್ತಿದೆ ಧ್ರುವ ಸರ್ಜಾ ಬಾಡಿ! ಹೊಸ ವರ್ಕ್ಔಟ್ ವಿಡಿಯೋ ವೈರಲ್

Published on
ಬೆಂಗಳೂರು: 2 ಗಂಟೆಗಳ ಹಿಂದೆ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಅವರು ತಾವು ಜಿಮ್​ನಲ್ಲಿ ವರ್ಕ್ಔಟ್ ಮಾಡುತ್ತಿರುವ 35 ಸೆಕೆಂಡ್​ಗಳ ಒಂದು ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟ ವಿಡಿಯೋ ಹಂಚಿಕೊಂಡ 2 ಗಂಟೆಯೊಳಗೆ ಬರೋಬ್ಬರಿ 5,79,000 ಕ್ಕೂ ಹೆಚ್ಚು ವೀವ್ಸ್ ಬಂದಿವೆ. ಈ ವಿಡಿಯೋದಲ್ಲಿ ನಟ ಧ್ರುವ ಸರ್ಜಾ ಅವರು ಹಲವು ವ್ಯಾಯಾಮಗಳನ್ನು ಮಾಡುತ್ತಿರುವುದು ಕಂಡುಬಂದಿದೆ.
ಅಂದಹಾಗೆ, 'ಮಾರ್ಟಿನ್' ಎಂಬ ಕನ್ನಡ ಸಿನಿಮಾದಲ್ಲಿ ನಟಿಸಲಿರುವ ನಟ ಧ್ರುವ ಸರ್ಜಾ ಅವರು ಹಲವು ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಹಾಗಾಗಿ, ಅವರು ತಮ್ಮ ದೇಹವನ್ನು ಜಿಮ್​ನಲ್ಲಿ ಸಿಕ್ಕಾಪಟ್ಟೆ ಹುರಿಗೊಳಿಸುತ್ತಿದ್ದಾರೆ. ಇನ್ನು, ಇತ್ತೀಚೆಗೆ ಕಾಶ್ಮೀರ್​ನಲ್ಲಿ ಶೂಟಿಂಗ್ ಮುಗಿಸಿಕೊಂಡಿರುವ ಈ ಚಿತ್ರತಂಡ, ಎರಡನೇ ಹಂತದ ಶೂಟಿಂಗ್ ಮಾಡಲು ತಯಾರಿ ಮಾಡುತ್ತಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net