

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಸದ್ಯ ಟೈಮಿಂಗ್ ಇರುವ ಕಾಮಿಡಿ ನಟ ಎಂದೇ ಹೆಸರು ಮಾಡಿರುವ ಧರ್ಮಣ್ಣ ಕಡೂರು ಈಗ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಕಾಣದಂತೆ ಮಾಯವಾದನು ಸಿನಿಮಾದ ಪಾತ್ರ ಎಲ್ಲರಿಗೂ ಇಷ್ಟವಾಗಿದೆ.
ಸಿನಿಮಾ ನೋಡಿದ ಎಷ್ಟೋ ಮಂದಿ ಧರ್ಮಣ್ಣ ಅವರ ನಟನೆ ಕಂಡು ಫಿದಾ ಆಗಿದ್ದರು. ಈಗ ಅವರು ದರ್ಶನ್ ಜತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ‘ನನ್ನ ವೃತ್ತಿ ಬದುಕಿನಲ್ಲಿ ದೊಡ್ಡ ಬಜೆಟ್ನ ಚಿತ್ರ ಎಂದರೆ ‘ರಾಬರ್ಟ್’. ಈ ಚಿತ್ರದಲ್ಲಿ ನನ್ನ ಸೀನ್ ಹೆಚ್ಚು ದರ್ಶನ್ ಮತ್ತು ನಾಯಕಿಯ ಜತೆಯೇ ಇದೆ.
ಬೆಂಗಳೂರು, ಕಾಶಿ, ಹೈದರಾಬಾದ್.. ಹೀಗೆ ಸಾಕಷ್ಟು ಕಡೆ ಶೂಟಿಂಗ್ ನಡೆದಿದೆ. ಸೆಟ್ನಲ್ಲಿ ದರ್ಶನ್ ಅವರ ಜತೆ ನಟಿಸಿದ್ದೇ ಒಂದು ದೊಡ್ಡ ಅನುಭವ. ಶಾಟ್ ಮುಗಿದ ಕೂಡಲೇ ಅವರು ಬಂದು ನಮ್ಮೆಲ್ಲರ ಜತೆ ಕುಳಿತು ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಸದ್ಯಕ್ಕೆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಬಹುದು. ಪಾತ್ರ ಏನು ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು ಇಲ್ಲ ನಿರ್ದೇಶಕರು ಹೇಳಬೇಕು’ ಎನ್ನುತ್ತಾರೆ ಧರ್ಮಣ್ಣ ಕಡೂರು.
‘ರಾಮಾ ರಾಮಾ ರೇ’ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಯಾದ ಧರ್ಮಣ್ಣ ಸದ್ಯ ಸಖತ್ ಬಿಜಿ ಇರುವ ನಟ. ಈಗ ‘ಇನ್ಸ್ಪೆಕ್ಟರ್ ವಿಕ್ರಂ’ ಸೇರಿದಂತೆ ಒಂದಷ್ಟು ಚಿತ್ರಗಳು ರಿಲೀಸ್ಗೆ ರೆಡಿ ಇವೆ. ‘ಕಾಣದಂತೆ ಮಾಯವಾದನು’ ಆದ ಮೇಲೆ, ಮೂರ್ನಾಲ್ಕು ಚಿತ್ರಗಳ ಆಫರ್ ಒಮ್ಮೆಲೆ ಬಂದಿದೆ, ಆದರೆ ಕಥೆ ಕೇಳಿಕೊಂಡು ನಂತರ ಡಿಸೈಡ್ ಮಾಡುತ್ತೇನೆ ಎನ್ನುತ್ತಾರೆ ಅವರು.