ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅತ್ಯುತ್ತಮ ಅಭಿನಯ ನೀಡಿದರೂ ಪ್ರಶಸ್ತಿ ಸಿಗದ ಕ್ಷಣಗಳನ್ನು ನೆನಪಿಸಿಕೊಂಡ ಧನುಷ್, "ನನ್ನ ವೃತ್ತಿಜೀವನದ ಆರಂಭದಲ್ಲಿ ತೆರೆಕಂಡ 'ಅದು ಒರು ಕನಾ ಕಾಲಮ್' ಚಿತ್ರಕ್ಕೆ ಖಂಡಿತ ಪ್ರಶಸ್ತಿ ಸಿಗುತ್ತದೆ ಎಂದು ಎಲ್ಲರೂ ಹೇಳಿದ್ದರು. ಆಗ ನಾನು ಬಹಳ ಸಣ್ಣವನಾಗಿದ್ದೆ, ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದೆ ಆದರೆ ಸಿಗಲಿಲ್ಲ. ತದನಂತರ ಪುದುಪೇಟೈ, ಮಾಯಕ್ಕಮ್ ಎನ್ನ, 3, ಮರ್ಯಾನ್, ರಾಂಜಣಾ, ವಡ ಚೆನ್ನೈ ಮತ್ತು ಕರ್ಣನ್ ನಂತಹ ಸಿನಿಮಾಗಳಲ್ಲಿನ ನಟನೆಗೆ ರಾಷ್ಟ್ರ ಪ್ರಶಸ್ತಿ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ ಸಮಯದಲ್ಲಿ ನನಗೆ ಪ್ರಶಸ್ತಿಗಳು ಸಿಗಲಿಲ್ಲ ಎಂದು ಹೇಳಿದರು.