ಮದುವೆ ವಿಚ್ಛೇದನ ವದಂತಿಗೆ ಸ್ಪಷ್ಟನೆ ನೀಡಿದ ನಟಿ ಅಮಲಾ ಪೌಲ್​ ಧನುಷ್​ ಬಗ್ಗೆ ಹೇಳಿದ್ದು ಹೀಗೆ...

Dhanush
Published on

ಚೆನ್ನೈ: ನಿರ್ದೇಶಕ ಎ.ಎಲ್​. ವಿಜಯ್​ರೊಂದಿಗಿನ ವಿಚ್ಛೇದನ ವದಂತಿಗೆ ಕೊನೆಗೂ ಮೌನ ಮುರಿದಿರುವ ಬಹುಭಾಷ ನಟಿ ಅಮಲಾ ಪೌಲ್, ಯಾರೂ ಕೂಡ ನನ್ನ ವಿಚ್ಛೇದನಕ್ಕೆ ಜವಾಬ್ದಾರರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದಕ್ಕೂ ಮುನ್ನ ಅಮಲಾ ಪೌಲ್ ವಿಚ್ಛೇದನ ಹಿಂದೆ ಕಾಲಿವುಡ್​ ಸೂಪರ್​​ ಸ್ಟಾರ್ ಧನುಷ್​ ಅವರ ಪಾತ್ರವಿದೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ನಡೆದ ಸಂದರ್ಶನದಲ್ಲಿ ವದಂತಿಯನ್ನು ಅಮಲಾ ಪೌಲ್​ ತಳ್ಳಿ ಹಾಕಿದ್ದಾರೆ.

ನನ್ನ ವಿಚ್ಛೇದನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಸ್ಟೋರಿಗಳು ಓಡಾಡುತ್ತಿವೆ. ಅನವಶ್ಯಕವಾಗಿ ವಿವಾದಗಳನ್ನು ಎಳೆದು ತರಲಾಗುತ್ತಿದೆ. ವೈಯಕ್ತಿಕ ಕಾರಣಗಳಿಂದ ವಿಜಯ್​ ಅವರೊಂದಿಗೆ ವಿಚ್ಛೇದನ ಪಡೆಯಲು ನಿರ್ಧರಿಸಿದೆ. ಇಂಡಸ್ಟ್ರಿಯ ಯಾರೊಬ್ಬರು ಇದರಲ್ಲಿ ಪಾತ್ರರಾಗಿಲ್ಲ. ಧನುಷ್ ನನ್ನ ಹಿತ ಬಯಸುವವರಲ್ಲಿ ಒಬ್ಬರು ಎಂದು ಅಮಲಾ ಪೌಲ್​ ಹೇಳಿದ್ದಾರೆ. ಇದೇ ವೇಳೆ ಸದ್ಯಕ್ಕೆ ಯಾವುದೇ ಮದುವೆ ಆಲೋಚನೆ ಇಲ್ಲ. ನನ್ನ ಮುಂದಿನ ಚಿತ್ರಗಳು ಬಿಡುಗಡೆಗೊಂಡ ಬಳಿಕ ನಾನು ನನ್ನ ಮದುವೆ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ನಿರ್ದೇಶಕ ವಿಜಯ್​ ತಂದೆ ನಿರ್ಮಾಪಕ ಅಳಗಪ್ಪನ್​ ಧನುಷ್​ ಅವರೇ ಅಮಲಾ ಮತ್ತು ವಿಜಯ್​ ನಡುವಿನ ವಿಚ್ಛೇದನಕ್ಕೆ ಕಾರಣ ಎಂದು ಆರೋಪಿಸಿದ್ದರು. ಮದುವೆ ನಂತರ ವಿಜಯ್​ ಮತ್ತು ಅಮಲಾ ಇಂಡಸ್ಟ್ರಿಯನ್ನು ಬಿಡಬೇಕೆಂದಿದ್ದರು. ಆದರೆ, ಧನುಷ್​ ನಿರ್ಮಾಣದ "ಅಮ್ಮಕನಕ್ಕು" ಗಾಗಿ ಅಮಲಾರನ್ನು ಧನುಷ್​ ಸಂಪರ್ಕಿಸಿದ್ದರು. ಸಿನಿಮಾದಲ್ಲಿ ನಟಿಸುವಂತೆ ಬಲವಂತವಾಗಿ ಮನವೊಲಿಸಿದ್ದಾರೆ ಎಂದು ಹೇಳಿದ ಬಳಿಕ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಇದೀಗ ಅಮಲಾ ಅವರೇ ಇದಕ್ಕೆಲ್ಲ ಪೂರ್ಣ ವಿರಾಮ ಹಾಡಿದ್ದಾರೆ.

ಅಂದಹಾಗೆ ಸಿನಿಮಾ ವಿಚಾರಕ್ಕೆ ಬಂದರೆ ಅಮಲಾಅವರು ಕೆ.ಆರ್​ ವಿನೋದ್​ ನಿರ್ದೇಶನದ "ಅಧೋ ಅಂಥ ಪರವೈ ಪೊಲಾ" ಚಿತ್ರದಲ್ಲಿ ನಟಿಸಿದ್ದು, ಫೆ. 28ಕ್ಕೆ ಚಿತ್ರ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net