

ಬೆಂಗಳೂರು: ಸಿನಿಮಾರಂಗವನ್ನು ಪೈರಸಿ ನಾನಾ ರೂಪದಲ್ಲಿ ಕಾಡುತ್ತಿದೆ. ಅದರಲ್ಲೂ ಇತ್ತೀಚೆಗೆ ‘ಟೆಲಿಗ್ರಾಮ್ ರೂಪದಲ್ಲಿ ಕಾಡುತ್ತಿರುವ ಪೈರಸಿ ಚಿತ್ರರಂಗಕ್ಕೆ ದೊಡ್ಡ ಕಾಟವನ್ನೇ ನೀಡುತ್ತಿದೆ. ಪ್ರೇಕ್ಷಕರನ್ನು ಕೈಹಿಡಿದು ಚಿತ್ರಮಂದಿರಕ್ಕೆ ಕರೆದುಕೊಂಡು ಬರಬೇಕಾಗಿರುವ ಈ ಸಂದರ್ಭದಲ್ಲಿ ಸಿನಿಮಾಗಳನ್ನೇ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬಿಟ್ಟಿಯಾಗಿ ಪ್ರೇಕ್ಷಕರ ಕೈಗೇ ಕೊಟ್ಟುಬಿಟ್ಟರೆ ಸಿನಿಮಾ ಮಾಡಿದವರ ಪರಿಸ್ಥಿತಿ ಹೇಗಾಗಬೇಡ? ಅಂಥದ್ದೊಂದು ಪರಿಸ್ಥಿತಿಯನ್ನು ಭಾಷಾತೀತವಾಗಿ ಎಲ್ಲ ಚಿತ್ರರಂಗವೂ ಎದುರಿಸಲಾರಂಭಿಸಿದೆ. ಅದರಿಂದ ಕನ್ನಡ ಚಿತ್ರರಂಗವೂ ಹೊರತಾಗೇನೂ ಇಲ್ಲ. ಅದಕ್ಕೀಗ ತಾಜಾ ಉದಾಹರಣೆ ಎಂದರೆ ಕಳೆದ ಶುಕ್ರವಾರವಷ್ಟೇ ಬಿಡುಗಡೆ ಆಗಿರುವ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾ.
ಬಿಡುಗಡೆಯಾದ ಎರಡೇ ದಿನಕ್ಕೆ ‘ಪಾಪ್ಕಾರ್ನ್ ಮಂಕಿ ಟೈಗರ್’ನ ಪೈರೇಟೆಡ್ ಪ್ರತಿಗಳು ಟೆಲಿಗ್ರಾಮ್ ಚಾನೆಲ್ಗಳಲ್ಲಿ ಹರಿದಾಡಲಾರಂಭಿಸಿವೆ. ಇದು ಚಿತ್ರತಂಡದ ಗಮನಕ್ಕೂ ಬಂದಿದ್ದು, ನಾಯಕ ಡಾಲಿ ಧನಂಜಯ ಕೂಡ ಆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಟೆಲಿಗ್ರಾಮ್ ವಿವಿಧ ಚಾನೆಲ್ಗಳಲ್ಲಿ ಪೈರೇಟೆಡ್ ಸಿನಿಮಾಗಳ ಹಂಚಿಕೊಳ್ಳುವಿಕೆ ಹೊಸದೇನಲ್ಲ, ಇದು ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತವೂ ಅಲ್ಲ. ಆಯಾ ಭಾಷೆಗಳ ಸಿನಿಮಾಗಳ ಹಂಚಿಕೊಳ್ಳುವಿಕೆಗೆಂದೇ ಅಲ್ಲಿ ಪ್ರತ್ಯೇಕ ಚಾನೆಲ್ಗಳು ಹಲವು ಇವೆ. ಪ್ರತಿಯೊಂದಕ್ಕೂ ಲಕ್ಷಾಂತರ ಸಬ್ಸ್ಕ್ರಿಪ್ಷನ್ಸ್ ಇವೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ‘ಪ್ಯಾರಸೈಟ್’, ಕೆಲವು ದಿನಗಳ ಹಿಂದೆ ತೆರೆಕಂಡಿರುವ ‘ದರ್ಬಾರ್’, ‘ಗುಡ್ನ್ಯೂಜ್’
ನಂಥ ಸಿನಿಮಾಗಳನ್ನೂ ಅಲ್ಲಿನ ಚಾನೆಲ್ಗಳಲ್ಲಿ ಹರಿಬಿಡಲಾಗಿದೆ. ಮತ್ತೊಂದೆಡೆ ಇಂಥ ಪೈರೇಟೆಡ್ ಸಿನಿಮಾಗಳನ್ನು ವೀಕ್ಷಿಸಲೆಂದೇ ಟೆಲಿಗ್ರಾಮ್ ಡೌನ್ಲೋಡ್ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ವಾಟ್ಸ್ಆಪ್ಗಿಂತಲೂ ಹೆಚ್ಚಿನ ಅಡ್ವಾಂಟೇಜ್ ಇರುವ ಟೆಲಿಗ್ರಾಮ್ ತಂತ್ರಾಂಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಬದಲು ಹಲವರು ಪೈರೇಟೆಡ್ ಸಿನಿಮಾಗಳಿಗೆಂದೇ ಬಳಸಿಕೊಳ್ಳುತ್ತಿರುವುದು ದುರಂತ ಎಂಬ ಮಾತುಗಳೂ ಕೇಳಿಬರುತ್ತಿವೆ.
ಎಷ್ಟು ಕಷ್ಟಪಟ್ಟು ಸಿನಿಮಾ ಮಾಡಿದರೂ, ಎಂಥ ಪಾತ್ರಗಳನ್ನು ಜೀವಿಸಿದರೂ..! ಅದ್ಭುತ, ಅಮೋಘ, ಜೈ ಕರ್ನಾಟಕ ಮಾತೆ. ನಿಮ್ಮಂತವರು ಬೇಕು, ಇಲ್ಲಂದ್ರೆ ಬೇಗ ಲೈಫ್ ಬೋರ್ ಆಗಿಬಿಡುತ್ತೆ. ಇದರ ಮಧ್ಯೆ ಹೌಸ್ಫುಲ್ ಶೋಸ್ ಕೊಡ್ತಾ ಇರೋ ನಿಜ ಸಿನಿಮಾಪ್ರೇಮಿಗಳಿಗೆ ನನ್ನ ಕೃತಜ್ಞತೆ. ಯಾರು ಯಾರ ಓಟನೂ ನಿಲ್ಸಕ್ಕಾಗಲ್ಲ.. | ಧನಂಜಯ ಚಿತ್ರದ ನಾಯಕ