

ನವದೆಹಲಿ: ಆದಿಪುರುಷ್(Adipurush) ಚಿತ್ರವನ್ನು ಈ ಕೂಡಲೇ ಬ್ಯಾನ್(Ban) ಮಾಡಬೇಕು ಎಂದು ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್(Delhi Highcourt) ಇಂದು ತಿರಸ್ಕರಿಸಿದೆ.
ಆದಿಪುರುಷ್ ಚಿತ್ರ ಈಗಾಗಲೇ ಅನೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಬಗ್ಗೆ ಸದ್ಯ ಯಾವುದೇ ತುರ್ತು ವಿಚಾರಣೆ ನಡೆಸುವ ಅವಶ್ಯಕತೆಯಿಲ್ಲ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ. ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಆಗುವುದಿಲ್ಲ ಎಂದು ದೆಹಲಿ ನ್ಯಾಯಾಲಯ ನಿರಾಕರಿಸಿರುವುದು ಇದೀಗ ಮುನ್ನೆಲೆಗೆ ಬಂದಿದೆ.
"ಚಿತ್ರವು ಈಗಾಗಲೇ ಬಿಡುಗಡೆಯಾಗಿದ್ದು, ಬಿಡುಗಡೆಯ ದಿನಾಂಕ ಕೂಡ ಮೊದಲೇ ತಿಳಿದಿತ್ತು! ಮತ್ತು ತುರ್ತು ವಿಚಾರಣೆಗೆ ಯಾವುದೇ ಪ್ರಕರಣವನ್ನು ಮಾಡಲಾಗಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾವನ್ನು ನೀವು ಏಕೆ ತಡೆಯುತ್ತಿದ್ದೀರಿ? ಸದ್ಯಕ್ಕೆ, ತುರ್ತು ಇದೆ ಎಂದು ನಮಗೆ ಮನವರಿಕೆಯಾಗಿಲ್ಲ, ದಯವಿಟ್ಟು ಜೂನ್ 30 ರಂದು ಹಾಜರಾಗಿ. ಆದ್ರೆ, 30ರ ವೇಳೆಗೆ ಅರ್ಜಿಯ ಉದ್ದೇಶವು ವಿಫಲಗೊಳ್ಳುತ್ತದೆ" ಎಂದು ನ್ಯಾಯಾಲಯ ಪ್ರತ್ಯೇಕವಾಗಿ ಉಲ್ಲೇಖಿಸಿ ಹೇಳಿದೆ,(ಏಜೆನ್ಸೀಸ್).