ದೀಪಿಕಾ ತದ್ರೂಪಿಗೆ ಅಭಿಮಾನಿಗಳು ಫಿದಾ...ಫೋಟೋ ಶೇರ್​ ಮಾಡಿಕೊಂಡ ಈ ಯುವತಿ ಯಾರು?

Deepika 1
Published on

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಹೋಲುವಂತಹ ಯುವತಿಯ ಫೋಟೋ ಭಾರೀ ವೈರಲ್​ ಆಗುತ್ತಿದೆ.

ಆಗ್ಗಾಗ್ಗೆ ದೀಪಿಕಾಳಂತೆಯೇ ಫೋಟೋಗೆ ಪೋಸ್​ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಈ ಯುವತಿಯ ಫೋಟೋಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ನೀವಿಬ್ಬರೂ ಅವಳಿ-ಜವಳಿನಾ ಎಂದು ಕೇಳಿದರೇ, ಅರೆ..ನಾನು ದೀಪಿಕಾ ಎಂದೇ ಭಾವಿಸಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ ಈ ಯುವತಿ ಹೆಸರು ರಿಜುತಾ ಘೋಷ್​ ದೆಬ್​​. ಈಕೆ ಕೋಲ್ಕತ್ತಾ ಮೂಲದವಳಾಗಿದ್ದು, ಡಿಜಿಟಲ್​ ಕಂಟೆಂಟ್​ ಡವಲಪರ್​ ಆಗಿ ಕೆಲಸ ಮಾಡುತ್ತಿದ್ದಾಳೆ. ಅಂದಹಾಗೆ ಇನ್​ಸ್ಟಾಗ್ರಾಂನಲ್ಲಿ ಈಕೆ 49.7 ಸಾವಿರ ಹಿಂಬಾಲಕರನ್ನು ಹೊಂದಿದ್ದಾಳೆ. ದೀಪಿಕಾ ಅಭಿಮಾನಿಯಾಗಿದ್ದು, ಆಕೆಯಂತೆಯೇ ನಕಲು ಮಾಡಿ ಫೋಟೋಶೂಟ್​ ಮಾಡಿಸುವುದು ಫೋಟೋ ಹಂಚಿಕೊಳ್ಳುವುದು ಸಾಮಾನ್ಯ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net