ಗಂಡನಷ್ಟೇ ಸಂಭಾವನೆ ಕೇಳಿದ್ದರಿಂದ 'ಬೈಜು ಬಾವ್ರಾ' ಚಿತ್ರದಿಂದ ದೀಪಿಕಾ ಔಟ್​!

Baiju Bawra - Deepika Padukone - Final
Published on

ಮುಂಬೈ: ರಣವೀರ್​ ಸಿಂಗ್​ ಅಭಿನಯದಲ್ಲಿ 'ಬೈಜು ಬಾವ್ರಾ' ಎಂಬ ಚಿತ್ರವನ್ನು ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶಿಸುವುದಕ್ಕೆ ಹೊರಟಿರುವುದು ಹಳೆಯ ಸುದ್ದಿ. ಈ ಚಿತ್ರದಲ್ಲಿ ರಣವೀರ್​ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಿದ್ದರು ಸಂಜಯ್​ ಲೀಲಾ ಬನ್ಸಾಲಿ. ಈಗ ಆಕೆಯನ್ನು ಹೊರಕ್ಕೆ ಕಳುಹಿಸಿ, ಇನ್ನೊಬ್ಬ ನಟಿಯ ಹುಡುಕಾಟದಲ್ಲಿದ್ದಾರೆ.

ಸಂಜಯ್​ ಲೀಲಾ ಬನ್ಸಾಲಿ, ರಣವೀರ್​ ಸಿಂಗ್ ಮತ್ತು ದೀಪಿಕಾ ಪಡುಕೋಣೆಯ ಕಾಂಬಿನೇಷನ್​ ಬಾಲಿವುಡ್​ನಲ್ಲಿ ಅತ್ಯಂತ ಜನಪ್ರಿಯ. ಈಗಾಗಲೂ ಈ ಮೂವರು, 'ರಾಮ್​-ಲೀಲಾ', 'ಪದ್ಮಾವತ್​' ಮತ್ತು 'ಬಾಜಿರಾವ್​ ಮಸ್ತಾನಿ' ಚಿತ್ರಗಳಲ್ಲಿ ಜತೆಯಾಗಿ ಕೆಲಸ ಮಾಡಿದ್ದು, ಮೂರಕ್ಕೆ ಮೂರೂ ಸೂಪರ್​ ಹಿಟ್​ ಆಗಿವೆ. ಇದೀಗ ಈ ಮೂವರೂ 'ಬೈಜು ಬಾವ್ರಾ'ದಲ್ಲಿ ಜತೆಗೆ ಕೆಲಸ ಮಾಡಬೇಕಿತ್ತು.

ಕೆಲವು ತಿಂಗಳುಗಳ ಹಿಂದೆ ದೀಪಿಕಾ ಅವರನ್ನು ಭೇಟಿ ಮಾಡಿ, ಚಿತ್ರದಲ್ಲಿ ನಟಿಸುವುದಕ್ಕೆ ಬನ್ಸಾಲಿ ಮನವೊಲಿಸಿದ್ದರು. ದೀಪಿಕಾ ಸಹ ಇದಕ್ಕೆ ಒಪ್ಪಿದ್ದು, ಇನ್ನೇನು ಎಲ್ಲವೂ ಫೈನಲ್​ ಆಗಬೇಕು ಎನ್ನುವಷ್ಟರಲ್ಲಿ, ದೀಪಿಕಾ ಚಿತ್ರತಂಡದಿಂದ ಹೊರಬಂದಿರುವ ಸುದ್ದಿ ಇದೆ. ಅವರು ಚಿತ್ರದಿಂದ ಹೊರಬರುವುದಕ್ಕೆ ಕಾರಣವೇನು ಗೊತ್ತಾ? ರಣವೀರ್​ಗೆ ಸರಿಸಮನಾಗಿ ಸಂಭಾವನೆ ಕೇಳಿದ್ದು.

ಆಶ್ಚರ್ಯವಾಗಬಹುದು. ಆದರೂ ಇದು ನಿಜ. ರಣವೀರ್​ ಎಷ್ಟು ಸಂಭಾವನೆ ಪಡೆಯುತ್ತಾರೋ, ಅಷ್ಟೇ ಸಂಭಾವನೆಯನ್ನು ತಮಗೂ ಕೊಡಬೇಕು ಎಂದು ದೀಪಿಕಾ ಷರತ್ತು ವಿಧಿಸಿದರಂತೆ. ಒಂದು ರೂಪಾಯಿ ಹೆಚ್ಚೂ ಬೇಡ, ಒಂದು ರೂಪಾಯಿ ಕಡಿಮೆಯೂ ಬೇಡ, ಅವರಿಗೇನು ಕೊಡುತ್ತೀರೋ ಸೇಮ್​ ಟು ಸೇಮ್​ ತಮಗೂ ಕೊಡಿ ಎಂದಾಗ ಬನ್ಸಾಲಿ ಅದಕ್ಕೆ ಒಪ್ಪಲಿಲ್ಲವಂತೆ. ನಾಯಕನಷ್ಟೇ ನಾಯಕಿಗೂ ಸಂಭಾವನೆ ಕೊಡುತ್ತಾ ಹೋದರೆ ಬಜೆಟ್​ ಹೆಚ್ಚುತ್ತದೆ ಎಂಬ ಕಾರಣಕ್ಕೆ ಅವರು ನಿರಕಾಕರಿಸಿದರಂತೆ. ಈಗ ದೀಪಿಕಾ ಅವರನ್ನು ಬಿಟ್ಟು, ಇನ್ನೊಬ್ಬ ನಾಯಕಿಯ ತಲಾಶ್​ನಲ್ಲಿದ್ದಾರಂತೆ ನಿರ್ದೇಶಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net