ಈ ವಿಚಾರದಲ್ಲಿ ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ ಫಸ್ಟ್​! ಆಲಿಯಾ ಸೆಕೆಂಡ್​, ಕರೀನಾಗೆ 3ನೇ ಸ್ಥಾನ!

Deepika Padukone
Published on

ಮುಂಬೈ: ಗುಳಿಕೆನ್ನೆ, ಬಟ್ಟಲು ಕಣ್ಣಿನ ಸುಂದರಿ ದೀಪಿಕಾ ಪಡುಕೋಣೆ ಬಾಲಿವುಡ್​​ನಲ್ಲೇ ಭಾರಿ ಸಂಭಾವನೆ ಪಡೆಯುವ​ ನಾಯಕಿ ಎನಿಸಿಕೊಂಡಿದ್ದಾರೆ.

2006ರಲ್ಲಿ ಬಿಡುಗಡೆಯಾದ ಐಶ್ವರ್ಯಾ ಎಂಬ ಕನ್ನಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಇವರು ನಂತರದ ದಿನಗಳಲ್ಲಿ ಶಾರುಖ್ ಖಾನ್ ಅಭಿನಯದ ಓಂ ಶಾಂತಿ ಓಂ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಸರಣಿ ಸಿನಿಮಾಗಳ ಗೆಲುವಿನ ಮೂಲಕ ನಿರೀಕ್ಷೆ ಮೀರಿ ಬೆಳೆದರು. ಆ ಕಾಲದಲ್ಲಿ ಯಶಸ್ವಿ ಸಿನಿಮಾಗಳ ಮೂಲಕ ಸಖತ್​ ಸದ್ದು ಮಾಡುತ್ತಿದ್ದ ನಟಿಯರ ನಡುವೆ ಬಾಲಿವುಡ್​ ಸಿನಿರಂಗದಲ್ಲಿ ದೀಪಿಕಾ ತಮ್ಮದೇಯಾದ ಛಾಪು ಮೂಡಿಸಿ ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಬೆಳೆದರು.

ಅತ್ಯುತ್ತಮ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಈಕೆ 2018ರಲ್ಲಿ ಬಿಡುಗಡೆಯಾದ ಪದ್ಮಾವತ್ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದರು. ಇದೀಗ 2024ರ ಅಂಕಿ-ಅಂಶ ಪ್ರಕಟಗೊಂಡಿದ್ದು, ಆ ಪಟ್ಟಿಯಲ್ಲಿಯೂ ದೀಪಿಕಾ ಅವರ ಹೆಸರು ಮೊದಲ ಸ್ಥಾನದಲ್ಲಿದೆ. ಪ್ರಸ್ತುತ ಇವರ ಸಂಭಾವನೆ 15 ರಿಂದ 20 ಕೋಟಿ ರೂ. ಆಗಿದೆ.

ದೀಪಿಕಾ ನಂತರ ಎರಡನೇ ಸ್ಥಾನದಲ್ಲಿ ಆಲಿಯಾ ಭಟ್ ಇದಾರೆ. ಇವರು ಒಂದು ಚಿತ್ರಕ್ಕೆ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಮೂರನೇ ಸ್ಥಾನದಲ್ಲಿರುವ ಕರೀನಾ ಕಪೂರ್ ಒಂದು ಚಿತ್ರಕ್ಕೆ 8 ರಿಂದ 11 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net