

ಕಾನ್ ಚಿತ್ರೋತ್ಸವಕ್ಕ ಚಿತ್ರ ಆಯ್ಕೆ ಆದರೆ ಅದೇ ದೊಡ್ಡದು ಎಂಬ ಭಾವ ಭಾರತೀಯ ಚಿತ್ರರಂಗದಲ್ಲಿದೆ. ಹಾಗಿರುವಾಗ, ಚಿತ್ರಗಳನ್ನು ಆಯ್ಕೆ ಮಾಡುವ ತೀರ್ಪುಗಾರರ ತಂಡದಲ್ಲಿ ಅವಕಾಶ ಸಿಕ್ಕರೆ? ಅಂಥ ಅವಕಾಶಗಳು ಭಾರತೀಯ ಸೆಲೆಬ್ರಿಟಿಗಳಿಗೆ ಸಿಕ್ಕೇ ಇಲ್ಲ ಎಂದೇನಿಲ್ಲ. ಇದಕ್ಕೂ ಮುನ್ನ ಅಂಥದ್ದೊಂದು ಅವಕಾಶ ಐಶ್ವರ್ಯಾ ರೈ, ಶರ್ವಿುಳಾ ಟ್ಯಾಗೋರ್, ನಂದಿತಾ ದಾಸ್ ಮತ್ತು ವಿದ್ಯಾ ಬಾಲನ್ಗೆ ಸಿಕ್ಕಿದೆ. ಈಗ ಆ ಸಾಲಿಗೆ ದೀಪಿಕಾ ಪಡುಕೋಣೆ ಸಹ ಸೇರಿದ್ದಾರೆ.
ಮೇ ತಿಂಗಳಲ್ಲಿ ನಡೆಯಲಿರುವ 75ನೇ ಕಾನ್ಚಿತ್ರೋತ್ಸವದಲಿ ್ಲ ದೀಪಿಕಾ ಪಡುಕೋಣೆ ಸಹ ತೀರ್ಪುಗಾರರಾಗಿರಲಿದ್ದಾರೆ. ಈ ತಂಡದ ನೇತೃತ್ವವನ್ನು ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ವಹಿಸಿದ್ದು, ಮಿಕ್ಕಂತೆ ರೆಬೆಕ್ಕಾ ಹಾಲ್, ನಓಮಿ ರಾಪೇಸ್, ಅಸ್ಗರ್ ಫರ್ಹಾದಿ, ಜಾಸ್ಮೀನ್ ಟ್ರಿಂಕಾ, ಜೆಫ್ ನಿಕೋಲ್ಸ್, ಲೇಡಿ ಎಲ್ವೈ ಮತ್ತು ಜಾಚಿಮ್ ಟ್ರೖೆರ್ ಇರಲಿದ್ದಾರೆ. ಈ ತಂಡವು ಕಾನ್ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಿರುವ ಚಿತ್ರಗಳನ್ನು ನೋಡಿ, ತೀರ್ಪು ನೀಡಲಿದ್ದಾರೆ.
ಅಂದಹಾಗೆ, ಜಗತ್ತಿನ ಜನಪ್ರಿಯ ಚಿತ್ರೋತ್ಸವಗಳಲ್ಲಿ ಒಂದಾಗಿರುವ ಕಾನ್ಚಿತ್ರೋತ್ಸವವು ಮೇ 17ರಂದು ಪ್ರಾರಂಭವಾಗಿ 28ಕ್ಕೆ ಮುಕ್ತಾಯವಾಗಲಿದೆ. ಈ ಬಾರಿಯ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಒಟ್ಟು 21 ಚಿತ್ರಗಳಿದ್ದು, ಈ ಪೈಕಿ ಯಾವ ಚಿತ್ರಕ್ಕೆ ಪ್ರಶಸ್ತಿ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಸದ್ಯ, ಶಾರೂಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರೀಕರಣದಲ್ಲಿ ದೀಪಿಕಾ ತೊಡಗಿಸಿಕೊಂಡಿದ್ದು, ಅದು ಮುಗಿಸಿ ಮುಂದಿನ ತಿಂಗಳು ಚಿತ್ರೋತ್ಸವದಲ್ಲಿ ಭಾಗಿ ಆಗಲಿದ್ದಾರೆ. -ಏಜೆನ್ಸೀಸ್