Photo Gallery | ದೀಪ್ವೀರ್ ದಂಪತಿಯ ಮುದ್ದು ಮಗಳು ದುವಾಳ ಕ್ಯೂಟ್​ ಫೋಟೋಗಳು ಇಲ್ಲಿವೆ... Dua

Dua
Published on

ದೀಪಿಕಾ ಪಡುಕೋಣೆ ( Deepika Padukone ) ಮತ್ತು ರಣವೀರ್ ಸಿಂಗ್ ( Ranveer Singh ) ಬಾಲಿವುಡ್​ ಸಿನಿ ಅಭಿಮಾನಿಗಳ ನೆಚ್ಚಿನ ಜೋಡಿ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಾರೆ. ದೀಪಿಕಾ ಮತ್ತು ರಣವೀರ್ ದಂಪತಿಗೆ ದುವಾ ಹೆಸರಿನ ಮಗಳಿರುವುದು ನಿಮಗೆ ಗೊತ್ತಿದೆ ಅಲ್ವಾ? ಹೌದು, ಗೊತ್ತಿದೆ, ಈಗ್ಯಾಕೆ ಆ ವಿಚಾರ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಏಕೆಂದರೆ, ಇದೇ ಮೊದಲ ಬಾರಿಗೆ ದುವಾಳ ಮುಖವನ್ನು ದೀಪ್ವೀರ್ ದಂಪತಿ ಬಹಿರಂಗಪಡಿಸಿದ್ದಾರೆ.

Dua

ದೀಪಾವಳಿ ಹಬ್ಬದ ಖುಷಿಯ ಸಂದರ್ಭದಲ್ಲಿ ದೀಪ್ವೀರ್ ದಂಪತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಗಳ ಫೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.

Dua
ಫೋಟೋಗಳಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸೊಗಸಾದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವುದನ್ನು ನೋಡಬಹುದು.
ರಣವೀರ್ ಬಿಳಿ ಬಣ್ಣದ ಕುರ್ತಾ ಮತ್ತು ಅದಕ್ಕೆ ಹೊಂದಿಕೆಯಾಗುವ ಕೋಟ್ ಮತ್ತು ಕುತ್ತಿಗೆಗೆ ಆಭರಣ ಧರಿಸಿದ್ದರೆ, ದೀಪಿಕಾ ಅವರು ಕೆಂಪು ಬಣ್ಣದ ಸೂಟ್ ಮತ್ತು ಸ್ಟೇಟ್‌ಮೆಂಟ್ ಆಭರಣಗಳಲ್ಲಿ ಅದ್ಭುತವಾಗಿ ಕಾಣುತ್ತಾರೆ.
Dua
ದುವಾ ನಗುತ್ತಾ ಕ್ಯಾಮೆರಾಗೆ ಪೋಸ್​​ ನೀಡಿದ್ದಾಳೆ. ದೀಪಿಕಾ ಅವರು ದುವಾಳನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಾಗ, ರಣವೀರ್, ದುವಾಳನ್ನು ಅಪ್ಪಿಕೊಂಡಾಗ, ದುವಾ ತನ್ನ ಮುದ್ದಾದ ಪೋಸ್​ಗಳಿಂದ ಎಲ್ಲರ ಗಮನ ಸೆಳೆದಿದ್ದಾಳೆ.
Dua
ಒಂದು ಫೋಟೋದಲ್ಲಿ ದೀಪಿಕಾ ಮತ್ತು ದುವಾ ಒಟ್ಟಿಗೆ ದೀಪಾವಳಿ ಪೂಜೆ ಮಾಡುವುದನ್ನು ನೋಡಬಹುದು. ಅಂದಹಾಗೆ, ದೀಪಿಕಾ ಅವರು ಈ ಪೋಸ್ಟ್‌ಗೆ "ದೀಪಾವಳಿ ಕಿ ಹಾರ್ದಿಕ್ ಶುಭಕಾಮನಾಂ" ಎಂದು ಹಿಂದಿಯಲ್ಲಿ ಶೀರ್ಷಿಕೆ ನೀಡಿದ್ದಾರೆ.
Dua
ಅಭಿಮಾನಿಗಳು ಕೂಡ ದುವಾ ಫೋಟೋ ನೋಡಿ ಖುಷಿಯಾಗಿದ್ದು, ದೀಪಾವಳಿಯ ಶುಭಾಯಗಳ ಮಹಾಪೂರವನ್ನೇ ಹರಿಸಿದ್ದಾರೆ. ದೀಪಿಕಾಗೆ ಇರುವ ಡಿಂಪಲ್​ ದುವಾಗೂ ಇದೆ ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net