

ಬೆಂಗಳೂರು: ಕರೊನಾವೈರಸ್ ಹಾವಳಿ ದೇಶಾದ್ಯಂತ ಮತ್ತೆ ಭುಗಿಲೆದ್ದಿದೆ. ಮಹಾರಾಷ್ಟ್ರದಲ್ಲಂತೂ ಜನತಾ ಕರ್ಪ್ಯೂ ಹೇರಲಾಗಿದೆ. ಇದರಿಂದ ಅಗತ್ಯ ಸೇವೆಗಳನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆಗಳ ಮೇಲೆ ಅಲ್ಲಿ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಶೂಟಿಂಗ್ನಲ್ಲಿ ಬ್ಯುಸಿ ಇರುತ್ತಿದ್ದ ಸಿನಿಮಾ ನಟ ನಟಿಯರು ಮನೆಯಲ್ಲಿಯೇ ಕೂರಬೇಕಾಗಿದೆ.
ಆದರೆ, ಬಾಲಿವುಡ್ ಸ್ಟಾರ್ ಜೋಡಿಯಾದ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ಮುಂಬೈ ಮಹಾರಾಷ್ಟ್ರ ಸಹವಾಸ ಬೇಡ ಎಂದು ಮುಂಬೈ ತೊರೆದಿದ್ದಾರೆ. ಮೂಲಗಳ ಪ್ರಕಾರ ಅವರು ನಿನ್ನೆ ರಾತ್ರಿಯೇ ಮುಂಬೈ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹಾರಿದ್ದಾರೆ.
ದೀಪಿಕಾ ಪಡುಕೋಣೆ ತವರಾಗಿರುವ ಕರ್ನಾಟಕಕ್ಕೆ ಅವರು ಬಂದಿದ್ದಾರೆ. ದೀಪಿಕಾ ಪಡುಕೋಣೆ ಅವರ ತಂದೆ ತಾಯಿ ಹಾಗೂ ಸಂಬಂಧಿಕರು ಬೆಂಗಳೂರಲ್ಲಿ ನೆಲೆಸಿರುವುದರಿಂದ ಈ ತಾರಾ ದಂಪತಿ ಅವರೊಟ್ಟಿಗೆ ಕೆಲ ಸಮಯ ಕಳೆಯಲು ಬಂದಿದ್ದಾರೆ ಎನ್ನಲಾಗಿದೆ. ಸದಾ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿರುತ್ತಿದ್ದ ಈ ದಂಪತಿಗಳು ಸ್ವಲ್ಪ ಸಮಯವನ್ನು ತಮ್ಮ ಕುಟುಂಬದೊಟ್ಟಿಗೆ ಕಳೆಯುತ್ತಿರುವುದು ಮೆಚ್ಚುವಂತದ್ದು ಎನ್ನುತ್ತಿದ್ದಾರೆ ನೆಟ್ಟಿಗರು.
ಇನ್ನು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯದ 83 ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. 1983ರ ವಿಶ್ವಕಪ್ ಕ್ರಿಕೆಟ್ ಆಧರಿಸಿ 83 ಸಿನಿಮಾ ಸಿದ್ದವಾಗುತ್ತಿದೆ.