ಸುಮ್ನಿರೋ, ನಿನ್​ ಅತ್ತಿಗೆ ಬೈತಿದ್ದಾಳೆ ... ಆಯುಷ್ಮಾನ್​ ಬಾಯಿ ಮುಚ್ಚಿಸಿದ ರಣವೀರ್​

Deepika Padukone - Final
Published on

ಲಾಕ್​ಡೌನ್​ನಿಂದ ಬಾಲಿವುಡ್​ ಸ್ಟಾರ್​ಗಳೆಲ್ಲಾ ಮನೆಯಲ್ಲೇ ಠಿಕಾಣಿ ಹೂಡಿದ್ದು, ಒಬ್ಬರನ್ನೊಬ್ಬರು ಮೀಟ್​ ಮಾಡದೆ ಬಹಳ ಸಮಯವಾಗಿದೆ. ಆದರೂ ಕೆಲವರು ವಿಡಿಯೋ ಕಾಲ್​ ಮೂಲಕವೋ, ಇನ್​ಸ್ಟಾಗ್ರಾಂ ಲೈವ್​ ಮೂಲಕವೋ ಭೇಟಿ ಮಾಡಿ ಮಾತಾಡುತ್ತಿರುತ್ತಾರೆ.

ಇತ್ತೀಚೆಗೆ ಒಂದು ಮಜವಾದ ಪ್ರಸಂಗ ನಡೆದಿದೆ. ರಣವೀರ್​ ಸಿಂಗ್​ ತಮ್ಮ ಮನೆಯಲ್ಲಿ ಮಧ್ಯಾಹ್ನ ನಿದ್ದೆ ಮಾಡುತ್ತಿದ್ದಾರೆ. ಅಷ್ಟರಲ್ಲಿ ಆಯುಷ್ಮಾನ್​ ಖುರಾನಾ ಕಡೆಯಿಂದ ಕರೆ ಬಂದಿದೆ. ಅದು ನೋಡಿದರೆ ಲೈವ್​ ಚಾಟ್​. ನಿದ್ದೆ ಮಾಡುತ್ತಿದ್ದ ರಣ್ವೀರ್​ ಎದ್ದು ಕುಳಿತಿದ್ದಾರೆ. ನಿದ್ದೆ ಮಾಡುತ್ತಿದ್ದೀನಿ, ಲೈವ್​ ಬೇಡ ಎಂದು ಹೇಳಿದ್ದಾರೆ. ಆದರೆ, ಆಯುಷ್ಮಾನ್​ ಕೇಳಿಲ್ಲ. ಮಾತಾಡು ಎಂದು ಒತ್ತಾಯ ಮಾತಾಡಿಸಿದ್ದಾರೆ.

ಈ ಸಂದರ್ಭದಲ್ಲಿ, ರಣವೀರ್​ ಅವರ ಹೊಸ ಹೇರ್​ಸ್ಟೈಲ್​ ಜಗಜ್ಜಾಹೀರಾಗಿಬಿಟ್ಟೆದೆ. ಈ ಮೂರು ತಿಂಗಳಲ್ಲಿ ಮನೆಯಲ್ಲೇ ಇದ್ದ ರಣವೀರ್​, ಉದ್ದಗೂದಲು ಬಿಟ್ಟಿದ್ದಾರೆ. ಆದರೆ, ತಮ್ಮ ಹೊಸ ಹೇರ್​ಸ್ಟೈಲ್​ನ್ನು ಯಾರಿಗೂ ತೋರಿಸಿರಲಿಲ್ಲ. ಹೀಗೆ ಇದ್ದಕ್ಕಿದ್ದಂತೆ ಲೈವ್​ ಬಂದ ಕಾರಣ, ಅನಿವಾರ್ಯವಾಗಿ ಅವರು ಹೇರ್​ಸ್ಟೈಲ್​ ತೋರಿಸುವಂತಾಗಿದೆ. ಅದಕ್ಕೆ ಪ್ರತಿಯಾಗಿ ಖುರಾನಾ ಸಹ ತಮ್ಮ ಟೋಪಿ ತೆಗೆದು, ತಮ್ಮ ಹೊಸ ಹೇರ್​ಸ್ಟೈಲ್​ ತೋರಿಸಿದ್ದಾರೆ.

ಹೀಗೆ ಜಾಲಿ ಮೂಡ್​ನಲ್ಲಿ ಇಬ್ಬರೂ ಮಾತಾಡುತ್ತಾ, ಆಡುತ್ತಾ ಧ್ವನಿ ಜೋರಾಗಿದೆ. ಇಬ್ಬರೂ ಕೇಕೆ ಹಾಕಿ ನಗುತ್ತಾ, ಏರುಧ್ವನಿಯಾಲ್ಲಿ ಮಾತಾಡುವುದನ್ನು ಕೇಳಿಸಿಕೊಂಡ ರಣ್ವೀರ್​ ಪತ್ನಿ ದೀಪಿಕಾ ಪಡುಕೋಣೆ ಅದೇನಂದರೋ ಗೊತ್ತಿಲ್ಲ. ಒಟ್ಟಿನಲ್ಲಿ ರಣವೀರ್​ ಸಿಂಗ್​ ಕಾಲ್​ ಕಟ್​ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಆಯುಷ್ಮಾನ್​ ಕೇಳಿದಾಗ, ಸುಮ್ನಿರೋ ನಿನ್​ ಅತ್ತಿಗೆ ಬೈತಿದ್ದಾಳೆ ಎಂದು ನಕ್ಕು, ಕಾಲ್​ ಕಟ್​ ಮಾಡಿದ್ದಾರೆ.

ರಣವೀರ್​ ಮತ್ತು ಆಯುಷ್ಮಾನ್​ ಅವರ ಈ ವಿಡಿಯೋ ಚಾಟ್​, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net