

ಬಾಲಿವುಡ್ನ ಬಹುತೇಕರನ್ನು ಕಂಗನಾ ರಣಾವತ್ ಟೀಕಿಸಿದ್ದಾರೆ. ಅದರಲ್ಲೂ ದೀಪಿಕಾ ಪಡುಕೋಣೆ ಬಗ್ಗೆ ಅವರು ಆಗಾಗ ಕಿಡಿಕಾರುತ್ತಲೇ ಇರುತ್ತಾರೆ. ಈಗ ಅದು ಮತ್ತೊಮ್ಮೆ ಮುಂದುವರೆದಿದೆ. ಇತ್ತೀಚೆಗೆ ಅಮೆಜಾನ್ ಪೆಂನಲ್ಲಿ ಬಿಡುಗಡೆಯಾಗಿರುವ "ಗೆಹ್ರಾಯಿಯಾಂ' ಚಿತ್ರದಲ್ಲಿ ದೀಪಿಕಾ ತೀರಾ ಬೋಲ್ಡ್ ಆಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಂಗನಾ ಪರೋಕ್ಷ$ವಾಗಿ ಕುಟುಕಿದ್ದಾರೆ.
ಆಧುನಿಕತೆಯ ನಡುವೆ ಯುವ ಪೀಳಿಗೆಯ ಸಂಬಂಧಗಳ ವರ್ತನೆ ಹೇಗಿರುತ್ತದೆ ಎಂಬುದನ್ನು "ಗೆಹ್ರಾಯಿಯಾಂ' ಚಿತ್ರದಲ್ಲಿ ಹೇಳಲಾಗಿದೆಯಾದರೂ, ದೀಪಿಕಾ ಇದುವರೆಗೂ ಕಾಣಿಸದ ರೀತಿಯಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದರು. ಟ್ರೇಲರ್ ಹೊರಬಂದಾಗಲೇ ಮೈಮಾಟ ಪ್ರದರ್ಶನ, ಚುಂಬನ ದೃಶ್ಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಇದೇ ವಿಚಾರಕ್ಕೆ ಕಂಗನಾ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, "ನಾನೂ ಈ ಸಹಸ್ತ್ರಮಾನದವಳೇ. ಈ ತರಹದ ಪ್ರಣಯವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಪ್ರಣಯದ ಹೆಸರಿನಲ್ಲಿ ಚಿತ್ರಗಳಲ್ಲಿ ಕಸ ತುಂಬಿಸುವುದು ಸರಿಯಲ್ಲ. ಕೆಟ್ಟ ಸಿನಿಮಾಗಳು ಯಾವತ್ತಿದ್ದರೂ ಕೆಟ್ಟವೇ. ಮೈಮಾಟ ಪ್ರದರ್ಶನ, ಅಶ್ಲೀಲತೆ ಎಂದಿಗೂ ಅಂತಹ ಸಿನಿಮಾಗಳನ್ನು ಬದುಕಿಸಲಾರವು' ಎಂದು ಪರೋಕ್ಷ$$ವಾಗಿಯೇ ದೀಪಿಕಾಗೆ ಚಾಟಿ ಬೀಸಿದ್ದಾರೆ. &ಏಜೆನ್ಸೀಸ್