

‘ಆಕೆ ನನ್ನ ಐಡಿಯಾ ಕದ್ದಿದ್ದಾಳೆ ...’
ಹಾಗಂತ ಕತ್ರೀನಾ ಮೇಲೆ ಗುರುತರವಾದ ಆರೋಪವನ್ನು ಹೊರಸಿದ್ದಾರೆ ದೀಪಿಕಾ ಪಡುಕೋಣೆ. ಇಷ್ಟಕ್ಕೂ ದೀಪಿಕಾ ಅವರ ಐಡಿಯಾ ಏನಾಗಿತ್ತು, ಅದನ್ನು ಕತ್ರೀನಾ ಹೇಗೆ ಕದ್ದರು ಎಂಬ ಕುತೂಹಲವಿದ್ದರೆ ಮುಂದೆ ಓದಿ.
ಕರೊನಾ ಭೀತಿಯಿಂದ ಇಡೀ ದೇಶವೇ ಶಟ್‌ಡೌನ್ ಆಗಿದೆ. ಹೌಸ್ ಅರೆಸ್ಟ್ ಆಗಿರುವ ಸೆಲೆಬ್ರಿಟಿಗಳೆಲ್ಲಾ ಮನೆಯಲ್ಲಿ ಹೇಗೆ ಕಾಲ ತಳ್ಳಬೇಕು ಎಂದು ಗೊತ್ತಾಗದೇ ಒದ್ದಾಡುತ್ತಿದ್ದಾರೆ. ಕೆಲವರು ವರ್ಕೌಟ್, ಓದು, ಚಿತ್ರಕಲೆ ಅಂತ ಬ್ಯುಸಿಯಾಗಿದ್ದರೆ, ಇನ್ನೂ ಕೆಲವರು ಮನೆಗೆಲಸ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಪಾತ್ರೆ ತೊಳೆಯುವ ವೀಡಿಯೋವೊಂದನ್ನು ಕತ್ರೀನಾ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆ ವೀಡಿಯೋವನ್ನು ರೀಪೋಸ್ಟ್ ಮಾಡಿರುವ ದೀಪಿಕಾ, ಅದು ತಮ್ಮ ಐಡಿಯಾ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕತ್ರೀನಾ ತಮ್ಮ ಐಡಿಯಾವನ್ನು ಕದ್ದಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ದೀಪಿಕಾ, ‘ನಾನು ಪಾತ್ರೆ ತೊಳೆಯಬೇಕೆಂದುಕೊಂಡಿದ್ದೆ. ಅಷ್ಟರಲ್ಲಿ ಕತ್ರೀನಾ ನನ್ನ ಐಡಿಯಾ ಕದ್ದು, ಪಾತ್ರೆ ತೊಳೆದಿದ್ದಾರೆ’ ಎಂದು ಹುಸಿಮುನಿಸು ತೋರಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ಕತ್ರೀನಾ, ‘ಪಾತ್ರೆ ತೊಳೆಯುವ ಹಕ್ಕನ್ನು ನನಗೆ ಕೊಟ್ಟಿದ್ದು ನಮ್ಮ ಮನೆಯ ಸದಸ್ಯೆ ರೂಪಾಲಿ’ ಎಂದು ನಗೆ ಬೀರಿದ್ದಾರೆ. ಅಷ್ಟೇ ಅಲ್ಲ, ಮನೆಯಲ್ಲೇ ಸೇಫ್ ಆಗಿರಿ ದೀಪಿಕಾಗೆ ಸಲಹೆ ನೀಡಿದ್ದಾರೆ.