ಓಲ್ಡ್ ಮಾಂಕ್ ಸೆಟ್​ನಲ್ಲಿ ದೀಪಾವಳಿ

Old Monk
Published on

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಬೆಳಗುತ್ತಿದೆ. ಮನೆಮನಗಳಲ್ಲಿ ಸಂಭ್ರಮದ ಬೆಳಕು ಮೂಡಿದೆ. ಸಿನಿಮಾ ಸೆಟ್​ಗಳಲ್ಲಿಯೂ ಆ ದೀಪ ಉರಿಯುತ್ತಿದೆ. ದೀಪಾವಳಿ ಪ್ರಯುಕ್ತ ಶ್ರೀನಿ ನಿರ್ದೇಶನದ ‘ಓಲ್ಡ್ ಮಾಂಕ್’ ಸೆಟ್​ನಲ್ಲಿಯೂ ಹಬ್ಬದ ಸಂಭ್ರಮ ಜೋರಾಗಿತ್ತು. ಇಡೀ ತಂಡ ಕಲರ್​ಫುಲ್ ಆಗಿಯೇ ಹಬ್ಬವನ್ನು ಆಚರಿಸಿದೆ.

ರಂಗುರಂಗಿನ ಕಾಸ್ಟ್ಯೂಮ್​ನಲ್ಲಿ ಚಿತ್ರದ ನಾಯಕ, ನಿರ್ದೇಶಕ ಶ್ರೀನಿ ಮತ್ತು ಅದಿತಿ ಪ್ರಭುದೇವ ಮಿಂಚಿದರೆ, ಇನ್ನುಳಿದವರೂ ಮಿಂಚಿಂಗ್ ಮಿಂಚಿಂಗ್ ಬಟ್ಟೆ ಧರಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ, ಬನ್ನೇರುಘಟ್ಟ ಬಳಿಯ ರೆಸಾರ್ಟ್​ವೊಂದರಲ್ಲಿ ‘ಓಲ್ಡ್​ಮಾಂಕ್’ ಚಿತ್ರದಲ್ಲಿ ಬರುವ ಮದುವೆ ಸಂಭ್ರಮವನ್ನು ಚಿತ್ರೀಕರಿಸಲಾಗುತ್ತಿತ್ತು. ಆ ದೃಶ್ಯಗಳನ್ನು ಸೆರೆಹಿಡಿದ ಬಳಿಕ ಇಡೀ ತಂಡ, ದೀಪ ಹಚ್ಚಿ, ಲಕ್ಷ್ಮೀ ಪೂಜೆ ಮಾಡಿ, ಸಿಹಿ ಹಂಚಿ ದೀಪಾವಳಿಯನ್ನು ಆಚರಿಸಿದೆ. ಸದ್ಯ ಚಿತ್ರದ ಶೇ. 80 ಭಾಗದ ಶೂಟಿಂಗ್ ಮುಗಿದಿದ್ದು, ಶೀಘ್ರದಲ್ಲೇ ಇನ್ನುಳಿದ ಭಾಗದ ಚಿತ್ರೀಕರಣ ಮುಗಿಸಲು ತಂಡ ಪ್ಲ್ಯಾನ್​ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net