ನಟಿ ಕಾಜಲ್ ಅಗರ್​ವಾಲ್​ ಸಂಭಾವನೆಯಲ್ಲಿ ಕಟ್!

Kajal
Published on

ನಾಯಕಿಯರಿಗೆ ಮದುವೆಯಾದರೆ ಅವಕಾಶಗಳು ಸಹಜವಾಗಿಯೇ ಕಡಿಮೆಯಾಗುತ್ತದೆ ಎಂಬ ಮಾತು ಸಂಪೂರ್ಣ ಸುಳ್ಳೇನಲ್ಲ. ಅದಕ್ಕೆ ಹೊಸ ಉದಾಹರಣೆ ಕಾಜಲ್ ಅಗರ್​ವಾಲ್. ಮದುವೆಗೂ ಮುನ್ನ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’, ಚಿರಂಜೀವಿ ಅಭಿನಯದ ‘ಆಚಾರ್ಯ’ ಮತ್ತು ನಾಗಾರ್ಜುನ ಅಭಿನಯದ ಹೊಸ ಚಿತ್ರವೊಂದಕ್ಕೆ ನಾಯಕಿಯಾಗಿದ್ದ ಕಾಜಲ್​ಗೆ, ಮದುವೆಯ ನಂತರ ಅವಕಾಶಗಳು ಏಕಾಏಕಿ ಕಡಿಮೆ ಅಗಿದೆಯಂತೆ. ಮದುವೆಯಾದರೂ ಅಭಿನಯ ಬಿಡಲೊಲ್ಲೆ ಎಂದು ಕಾಜಲ್ ಮೊದಲೇ ಘೋಷಿಸಿಕೊಂಡಿದ್ದರು. ಇನ್ನಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಕಾಜಲ್ ಮಹತ್ವದ ತೀರ್ಮಾನವೊಂದು ತೆಗೆದುಕೊಂಡಿದ್ದಾರಂತೆ.

ಈ ಹಿಂದೆ ಪಡೆಯುತ್ತಿದ್ದ ಸಂಭಾವನೆಯನ್ನು ಅರ್ಧಕ್ಕರ್ಧ ಅವರು ಇಳಿಸಿಕೊಂಡಿದ್ದಾ ರಂತೆ. ಸಂಭಾವನೆ ಕಡಿಮೆಯಾದ ಮೇಲಾದರೂ ಯಾರಾದರೂ ಬಂದು ಅವಕಾಶ ಕೊಡಬಹುದು ಎಂದು ಅವರು ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾ ದರೆ, ಸಂಭಾವನೆ ಕಡಿಮೆಯಾದ ಮೇಲೆ ಅವಕಾಶಗಳು ಹೆಚ್ಚಾಗಬಹುದಾ? ಕಾದು ನೋಡಬೇಕು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net