

ಬೆಂಗಳೂರು: ‘ಡಿಯರ್ ಸತ್ಯ’ ಎಂಬ ಚಿತ್ರ ಮುಗಿದೇ ಬಹಳ ದಿನಗಳಾಗಿವೆ. ಆದರೆ, ಕರೊನಾ ಅಡ್ಡ ಬಂದು, ಎಲ್ಲವೂ ತಡವಾಗಿ, ಈಗ ಕೊನೆಗೂ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಬಂದಿದೆ. ಮಾರ್ಚ್ 10ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಮೊದಲ ಹಂತವಾಗಿ ಇತ್ತೀಚೆಗೆ ಟ್ರೇಲರ್ ಹೊರಬಂದಿದೆ. ಒಂದು ಸಣ್ಣ ಸಮಾರಂಭ. ಆ ಸಮಾರಂಭಕ್ಕೆ ಶ್ರೀಮುರಳಿ ಮುಖ್ಯ ಅತಿಥಿ. ಅವರ ಕೈಯಿಂದ ಮೊದಲು ಟ್ರೇಲರ್ ಬಿಡುಗಡೆ. ಅವರಿಂದ ಚಿತ್ರತಂಡಕ್ಕೆ ಶುಭ ಹಾರೈಕೆ. ಆ ನಂತರ ವಂದನಾರ್ಪಣೆ...
ಈ ಮಧ್ಯೆ, ಚಿತ್ರತಂಡದವರು ಚಿತ್ರದ ಬಗ್ಗೆ ಒಂದಿಷ್ಟು ಮಾತನಾಡಿದರು. ಈ ಚಿತ್ರವನ್ನು ಮೊದಲು ತಮಿಳಿನಲ್ಲಿ ಮಾಡಬೇಕು ಅಂತ ಅಂದುಕೊಂಡಿದ್ದರಂತೆ ನಿರ್ದೇಶಕ ಶಿವಗಣೇಶ್. ‘ಚೆನ್ನೈನ ಹೈಕೋರ್ಟ್ ಎದುರು ಪ್ಯಾರಿಸ್ ಕಾರ್ನರ್ ಎಂಬ ಸ್ಥಳವಿದೆ. ಆ ಜಾಗವೇ ನನಗೆ ಕಥೆ ಬರೆಯುವುದಕ್ಕೆ ಸ್ಪೂರ್ತಿ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಕಥೆ ಮಾಡಿಟ್ಟುಕೊಂಡು ಹಲವು ವರ್ಷಗಳ ಕಾಲ ನಿರ್ವಪಕರಿಗಾಗಿ ಹುಡುಕಾಡಿದ್ದೇನೆ. ಕೊನೆಗೆ, ಗಣೇಶ್ ಪಾಪಣ್ಣಗೆ ಕಥೆ ಇಷ್ಟವಾಗಿ ಚಿತ್ರ ನಿರ್ವಿುಸಲು ಮುಂದೆ ಬಂದರು’ ಎನ್ನುತ್ತಾರೆ. ‘ಡಿಯರ್ ಸತ್ಯ’ದಲ್ಲಿ ನಾಯಕ-ನಾಯಕಿಯಾಗಿ ಸಂತೋಷ್ ಆರ್ಯನ್ ಮತ್ತು ಅರ್ಚನಾ ಕೊಟ್ಟಿಗೆ ನಟಿಸಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಗಣೇಶ್ ಪಾಪಣ್ಣ ಜತೆಗೆ ನಿರ್ವಣದಲ್ಲಿ ರಾಕ್ಲೈನ್ ವೆಂಕಟೇಶ್ ಮಗ ಯತೀಶ್ ವೆಂಕಟೇಶ್ ಮತ್ತು ಶ್ರೀನಿವಾಸ್ ಶ್ರೀಭಕ್ತ ಜತೆಯಾಗಿದ್ದಾರೆ.