

ಬೆಂಗಳೂರು: ಗಣೇಶ್ ಅಭಿನಯದ ‘ಸಖತ್’ ಮತ್ತು ಶರಣ್ ಅಭಿನಯದ ‘ಅವತಾರ್ ಪುರುಷ’ ಚಿತ್ರದ ಬಿಡುಗಡೆ ದಿನಾಂಕ ಬುಧವಾರ ಘೋಷಣೆ ಆಗಿವೆ. ವಿಶೇಷ ಏನೆಂದರೆ ಈ ಎರಡೂ ಚಿತ್ರಗಳನ್ನು ನಿರ್ದೇಶಿಸಿರುವುದು ನಿರ್ದೇಶಕ ‘ಸಿಂಪಲ್’ ಸುನಿ. ನ. 26ಕ್ಕೆ ‘ಅವತಾರ್ ಪುರುಷ’ ಸಿನಿಮಾ ತೆರೆಗೆ ಬರಲಿದೆ ಎಂದು ಈ ಹಿಂದೆ ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿಕೊಂಡಿದ್ದರು.
ಅದರಲ್ಲಿಗ ಸಣ್ಣ ಬದಲಾವಣೆ ಆಗಿದ್ದು, ನ.26ರ ಬದಲು ಡಿ. 10ಕ್ಕೆ ಬಿಡುಗಡೆ ಆಗಲಿದೆ. ಇತ್ತ ‘ಸಖತ್’ ನ. 26ಕ್ಕೆ ಬಿಡುಗಡೆ ಆಗಲಿದೆ. ಈ ಮೂಲಕ ಸುನಿಗಿದು ಡಬಲ್ ಧಮಾಕಾ. ಕೇವಲ ಎರಡು ವಾರಗಳ ಅಂತರದಲ್ಲಿ ಅವರ ಎರಡೂ ಸಿನಿಮಾಗಳು ಬಿಡುಗಡೆ ಆಗಲಿವೆ.