ಮತ್ತೆ ಒಂದಾದ ದಸರಾ ಜೋಡಿ ; ನಾನಿ, ಶ್ರೀಕಾಂತ್​ ಒಡೆಲಾ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ

Naani (2)
Published on

ಕಳೆದ ವರ್ಷ ತೆಲುಗು ನಟ ನಾನಿ, ಕನ್ನಡದ ದೀತ್​ ಶೆಟ್ಟಿ ಮತ್ತು ಕೀರ್ತಿ ಸುರೇಶ್​ ಅಭಿನಯಿಸಿದ್ದ "ದಸರಾ' ಸಿನಿಮಾ ಪ್ಯಾನ್​ ಇಂಡಿಯಾ ಸದ್ದು ಮಾಡಿತ್ತು. ಚಿತ್ರಕ್ಕೆ ಶ್ರೀಕಾಂತ್​ ಒಡೆಲಾ ಆ್ಯಕ್ಷನ್​ ಕಟ್​ ಹೇಳಿದ್ದರು. ಇದೀಗ ನಾನಿ ಮತ್ತು ಶ್ರೀಕಾಂತ್​ ಮತ್ತೊಂದು ಹೊಸ ಚಿತ್ರಕ್ಕೆ ಮತ್ತೆ ಕೈಜೋಡಿಸಿದ್ದಾರೆ. ಇದು ನಾನಿ ನಾಯಕನಾಗಿ ನಟಿಸಲಿರುವ 33ನೇ ಚಿತ್ರವಾಗಿದ್ದು, ಇತ್ತೀಚೆಗಷ್ಟೆ ಸ್ಟ್​ ಲುಕ್​ ಬಿಡುಗಡೆ ಮಾಡಲಾಗಿದೆ.

ಪೋಸ್ಟರ್​ನಲ್ಲಿ "ಉತ್ತಮ ನಾಯಕನಾಗಲು ಐಡೆಂಟಿಟಿಯ ಅಗತ್ಯವಿಲ್ಲ' ಎಂಬ ಬರಹವಿದ್ದು, ಮಾಸ್​ ಲುಕ್​ನಲ್ಲಿ ನಾನಿ ಮಿಂಚಿದ್ದಾರೆ. ಹಿಂದೆಂದೂ ಕಾಣದ ಅವತಾರದಲ್ಲಿ ಈ ಚಿತ್ರದಲ್ಲಿ ನಾನಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದೆ.

ಸದ್ಯ ನಾನಿ ವಿವೇಕ್​ ಆತ್ರೇಯಾ ನಿರ್ದೇಶಿಸುತ್ತಿರುವ "ಸರಿಪೋದ ಶನಿವಾರಂ' ಎಂಬ ಮತ್ತೊಂದು ಪ್ಯಾನ್​ ಇಂಡಿಯಾ ಚಿತ್ರದಲ್ಲಿ ಬಿಜಿಯಾಗಿದ್ದು, ಅದು ಇದೇ ಆಗಸ್ಟ್​ 29ರಂದು ಬಿಡುಗಡೆಯಾಗಲಿದೆ. &ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net