ಮೈಸೂರಿನಲ್ಲೇ ದಸರಾ ಸಂಭ್ರಮ: ತಾರೆಯರ ನವರಾತ್ರಿ

star dasara
Published on

ದಸರಾ ಹಬ್ಬದ ಸಮಯದಲ್ಲಿ ಪ್ರತಿದಿನ ಮನೆಯಲ್ಲಿ ಪೂಜೆ ಇದ್ದೇ ಇರುತ್ತದೆ. ಅಮ್ಮ ಒಂಬತ್ತು ದಿನಗಳ ಕಾಲ ಉಪವಾಸ ಇರುತ್ತಾರೆ. ಆಯಾ ದಿನದಂತೆ ದೇವಿಯರ ಪೂಜೆ ಮಾಡುತ್ತಾರೆ. ಮನೆಯಲ್ಲಿ ಆಯುಧ ಪೂಜೆಯನ್ನು ವಿಶೇಷವಾಗಿ ಆಚರಿಸುತ್ತೇವೆ. ಸಂಬಂಧಿಕರನ್ನು ಮನೆಗೆ ಕರೆದು ಅರಿಶಿನ ಕುಂಕುಮ ನೀಡುತ್ತೇವೆ. ಅಂದು ಮನೆಯ ಎಲ್ಲ ಸದಸ್ಯರೂ ಉಪವಾಸ ಇರುತ್ತೇವೆ.

ನನ್ನ ಅಜ್ಜಿ ಮೈಸೂರಿನವರು. ಬಾಲ್ಯದಲ್ಲಿ ಮೈಸೂರು ದಸರಾ ನೋಡಲು ಹೋಗುತ್ತಿದ್ದೆ. ಮಾಡೆಲಿಂಗ್ ಸೇರಿದ ನಂತರ, ಮೈಸೂರು ದಸರಾ ಸಾಂಪ್ರದಾಯಿಕ ಉಡುಗೆಗಳ ಫ್ಯಾಷನ್ ಶೋನಲ್ಲಿ ಭಾಗವಹಿಸಲು 2 ಬಾರಿ ಹೋಗಿದ್ದೆ. ಈಗ ನಾಲ್ಕು ವರ್ಷಗಳ ಬಳಿಕ ಈ ಬಾರಿಯೂ ಮೈಸೂರಿಗೆ ಹೋಗುತ್ತಿದ್ದೇನೆ. ಫ್ಯಾಷನ್ ಶೋನಲ್ಲಿ ಮೈಸೂರು ರೇಶ್ಮೆ ಸೀರೆ ಧರಿಸಲಿದ್ದೇನೆ. ಹೀಗಾಗಿ ಈ ವರ್ಷದ ದಸರಾ ಹಬ್ಬ ಕೂಡ ನನಗೆ ಸ್ಪೆಷಲ್ ಆಗಿರಲಿದೆ.

| ಸಂಹಿತಾ ವಿನ್ಯಾ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net