ಅಭಯಾರಣ್ಯದಲ್ಲಿ ದರ್ಶನ್ ಸಫಾರಿ

Darshan
Published on

ಶಿವಮೊಗ್ಗ: ಅರಣ್ಯ ಇಲಾಖೆ ರಾಯಭಾರಿ, ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಹಾಗೂ ಸ್ನೇಹಿತರ ಬಳಗ ಕಳೆದ ಎರಡು ದಿನಗಳಿಂದ ಭದ್ರಾ ಅಭಯಾರಣ್ಯದಲ್ಲಿ ಸಫಾರಿ ನಡೆಸುತ್ತಿದೆ.

ಶುಕ್ರವಾರ ಸಂಜೆ ಭದ್ರಾ ಜಲಾಶಯ ವೀಕ್ಷಣೆ ಬಳಿಕ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಸ್ನೇಹಿತರು ಹಾಗೂ ಕೆಲ ನಟರೊಂದಿಗೆ ದರ್ಶನ್ ತಂಗಿದ್ದರು. ಶನಿವಾರ ಸಫಾರಿಗೆ ತೆರಳಿದ ದರ್ಶನ್ ಮತ್ತವರ ತಂಡಕ್ಕೆ ಅಭಯಾರಣ್ಯದ ಮಧ್ಯದಲ್ಲಿರುವ ಬ್ರಿಟಿಷರ ಕಾಲದ ಬಂಗಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಟ ಚಿಕ್ಕಣ್ಣ ಹಾಗೂ ಶಿವಮೊಗ್ಗ, ಭದ್ರಾವತಿಯ ಕೆಲ ಆತ್ಮೀಯರೂ ಈ ಸಂದರ್ಭದಲ್ಲಿ ದರ್ಶನ್ ಜತೆಗಿದ್ದರು.

ದರ್ಶನ್, ಚಿಕ್ಕಣ್ಣ ಆಗಮಿಸಿದ್ದಾರೆಂಬ ವಿಷಯ ತಿಳಿದ ಅವರ ಅಭಿಮಾನಿಗಳು ಪ್ರವಾಸಿ ಮಂದಿರ ಎದುರು ಜಮಾವಣೆಗೊಂಡಿದ್ದರು. ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ‘ಚಾಲೆಂಜಿಂಗ್ ಸ್ಟಾರ್’ ಹರಸಾಹಸಪಡಬೇಕಾಯಿತು. ಅಭಿಮಾನಿಯೊಬ್ಬ ದರ್ಶನ್ ಕಾಲಿಗೆರಗಿ ಫೋಟೋ ತೆಗೆಸಿಕೊಂಡರೆ, ಯುವತಿಯೊಬ್ಬರು ನಟ ಚಿಕ್ಕಣ್ಣ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net