ಜನವರಿಯಿಂದ ಮದಕರಿ ನಾಯಕ

Darshan
Published on

ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ರಾಜವೀರ ಮದಕರಿ ನಾಯಕ’ ಚಿತ್ರದ ಎರಡನೇ ಹಂತದ ಶೂಟಿಂಗ್ ಯಾವಾಗಿನಿಂದ ಎಂಬುದರ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದೀಗ ಎರಡನೇ ಹಂತದ ಶೂಟಿಂಗ್ ಸಲುವಾಗಿ ಲೊಕೇಷನ್ ಹುಡುಕಾಟದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ಇತ್ತೀಚೆಗೆ ಕುಮಟಾ ಬಳಿ ಇರುವ ಮಿರ್ಜಾನ್ ಕೋಟೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ನೋಡಿ ಬಂದಿದೆ.

ಇದೆಲ್ಲವನ್ನೂ ಗಮನಿಸಿದರೆ, ಜನವರಿಯಿಂದ ದರ್ಶನ್ ಮದಕರಿ ನಾಯಕನ ಪೋಷಾಕು ತೊಡುವುದು ಖಚಿತ. ಅಂದಹಾಗೆ, ಈ ಚಿತ್ರಕ್ಕೆ ರಾಕ್​ಲೈನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದ್ದು, ಸುಮಲತಾ ಪಾತ್ರದ ಆಯ್ಕೆಯೊಂದನ್ನು ಹೊರತುಪಡಿಸಿದರೆ, ಇನ್ನುಳಿದ ಪಾತ್ರವರ್ಗದ ಬಗ್ಗೆಯೂ ತಂಡ ಗೌಪ್ಯತೆ ಕಾಯ್ದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net