ಚಿತ್ರರಂಗದಲ್ಲಿ ದರ್ಶನ್​ 23 ವರ್ಷ ... ಶುಭ ಕೋರಿದ ಸೆಲೆಬ್ರಿಟಿಗಳು

Darshan - Final
Published on

ಸೋಷಿಯಲ್​ ಮೀಡಿಯಾದಲ್ಲಿ ಇವತ್ತು ಸುದೀಪ್​ ಮತ್ತು ದರ್ಶನ್​ ಅವರ ಫೋಟೋಗಳು ರಾರಾಜಿಸುತ್ತಿವೆ. ಒಂದು ಕಡೆ ಸುದೀಪ್​ ಅಭಿನಯದ 'ಫ್ಯಾಂಟಮ್​' ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಇಂದು ಬಿಡುಗಡೆಯಾಗಿದ್ದರೆ, ಇನ್ನೊಂದು ಕಡೆ '23 ಇಯರ್ಸ್​ ಆಫ್​ ಬಾಸಿಸಮ್​' ಎಂಬ ದರ್ಶನ್​ ಅವರ ಪೋಸ್ಟರ್​ ಎಲ್ಲರ ಗಮನಸೆಳೆಯುತ್ತಿದೆ.

'ಚಾಲೆಂಜಿಂಗ್​ ಸ್ಟಾರ್​' ದರ್ಶನ್​ ಅವರ ಚಿತ್ರರಂಗಕ್ಕೆ ಬಂದು 23 ವರ್ಷಗಳಾಗಿವೆ. ಈ ಖುಷಿಯಲ್ಲಿ ಅವರ ಅಭಿಮಾನಿಗಳು ಕಾಮನ್​ ಡಿಸ್​ಪ್ಲೇ ಪಿಕ್ಚರ್​ ಹಂಚಿಕೊಂಡು ಸಂಬ್ರಮಪಡುತ್ತಿದ್ದಾರೆ. '23 ಇಯರ್ಸ್​ ಆಫ್​ ಬಾಸಿಸಮ್​' ಎಂಬ ಈ ಸಿಡಿಪಿಗಳು ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ದರ್ಶನ್​ ಅವರು ಚಿತ್ರರಂಗಕ್ಕೆ ಬಂದು ಅಷ್ಟು ಬೇಗ 23 ವರ್ಷಗಳು ಆಗಿ ಹೋದವಾ ಎಂಬ ಪ್ರಶ್ನೆ ಸಹಜ. ದರ್ಶನ್​ ಹೀರೋ ಆಗಿ ನಟಿಸಿದ ಮೊದಲ ಚಿತ್ರ 'ಮೆಜೆಸ್ಟಿಕ್​'. ಅದಕ್ಕೂ ಮುಂಚೆಯೇ ಅವರು 'ಮಹಾಭಾರತ', 'ದೇವರ ಮಗ', 'ಎಲ್ಲರ ಮನೆ ದೋಸೇನೂ', 'ಮಿಸ್ಟರ್​ ಹರಿಶ್ಚಂದ್ರ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಈ ಪೈಕಿ, ಅವರು ಮೊದಲು ಬಣ್ಣ ಹಚ್ಚಿದ ಚಿತ್ರ ಎಂದರೆ ಅದು ಎಸ್​. ನಾರಾಯಣ್​ ನಿರ್ದೇಶನದ 'ಮಹಾಭಾರತ'. ಈ ಚಿತ್ರ 1997ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಇದೀಗ ಬಿಡುಗಡೆಯಾಗಿ ಇವತ್ತಿಗೆ 23 ವರ್ಷಗಳು ಕಳೆದಿವೆ.

ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲ, ಹಲವು ನಟ-ನಟಿಯರು ಮತ್ತು ತಂತ್ರಜ್ಱರು ಸಹ ಈ ಸಂಭ್ರಮದಲ್ಲಿ ಭಾಗಿಯಾಗಿದ್ದು, ದರ್ಶನ್​ ಅವರಿಗೆ ಶುಭ ಕೋರುತ್ತಿದ್ದಾರೆ. 'ನೆನಪಿರಲಿ' ಪ್ರೇಮ್​, ತರುಣ್ ಸುಧೀರ್​, ವಿ. ಹರಿಕೃಷ್ಣ, ಶೈಲಜಾ ನಾಗ್​ ಸೇರಿದಂತೆ ಹಲವರು ದರ್ಶನ್​ಗೆ ಶುಭ ಕೋರಿದ್ದಾರೆ.

ಅಂದಹಾಗೆ, ಈ ಸಿಡಿಪಿಯನ್ನು ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ್ದು ದರ್ಶನ್​ ಅವರ ಗೆಳೆಯ ಮತ್ತು ನಟ ಪ್ರಜ್ವಲ್​ ದೇವರಾಜ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net