

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳಲ್ಲದೆ, ಚಿತ್ರರಂಗದ ಸಹದ್ಯೋಗಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ನಡುವೆ ಸ್ಟಾರ್ ನಟರೊಬ್ಬರು ಶುಭಾಶಯ ಕೋರಿ ಮಾಡಿರುವ ಟ್ವೀಟ್ಗೆ ದರ್ಶನ್ ಅಭಿಮಾನಿಯ ರೀಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇಂದು ಬೆಳಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹ್ಯಾಪಿ ಬರ್ತ್ಡೇ ದರ್ಶನ್ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ದರ್ಶನ್ ಅಭಿಮಾನಿಗಳು ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಓರ್ವ ಅಭಿಮಾನಿ ಮಾಡಿರುವ ರೀಟ್ವೀಟ್ ದಚ್ಚು ಮತ್ತು ಅಪ್ಪು ಅಭಿಮಾನಿಗಳ ನಡುವೆ ಕಿಚ್ಚು ಹಚ್ಚಿದೆ.
ರೀಟ್ವೀಟ್ ಮಾಡಿರುವ ಅಭಿಮಾನಿ "ಧನ್ಯವಾದಗಳು ಸರ್, ನಮ್ಮ ಡಿ ಬಾಸ್ ರೇಂಜ್ಗೆ ನೀವು ಬೆಳೆಯಬೇಕು" ಎಂದು ಟ್ವೀಟ್ ಮಾಡಿದ್ದಾನೆ. ಇದರಿಂದ ಕುಪಿತಗೊಂಡಿರುವ ಅಪ್ಪು ಅಭಿಮಾನಿಗಳು ಮೊದಲು ಟ್ವೀಟ್ ಡಿಲೀಟ್ ಮಾಡು. ಈಗಾಗಲೇ ಅಪ್ಪು ಸರ್ ಬೆಳೆದಿದ್ದಾರೆ. ಟ್ವೀಟ್ ಮಾಡುವ ಮುನ್ನ ಹಿಂದೆ ಮುಂದೆ ಯೋಚಿಸು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂದುವರಿದು ಮೊದಲು ನೀನು ಎಲ್ಲರನ್ನು ಬೆಳೆಸುವುದನ್ನು ಕಲಿ, ಆಗ ನಿಮ್ಮ ಹೀರೋ ಕೂಡ ಬೆಳೆಯುತ್ತಾರೆ. ನಮ್ಮ ಪವರ್ ಸ್ಟಾರ್ ಏನೆಂದು ಇಡೀ ದಕ್ಷಿಣ ಭಾರತ ಚಿತ್ರರಂಗಕ್ಕೆ ಗೊತ್ತು ಎಂದೆಲ್ಲ ಟೀಕಾ ಪ್ರಹಾರ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)