ಮಾರ್ಚ್ 3ಕ್ಕೆ ರಾಬರ್ಟ್​ ಮೊದಲ ಹಾಡು

Robert
Robert
Published on

ಬೆಂಗಳೂರು: ಇಷ್ಟು ದಿನ ಫಸ್ಟ್​ಲುಕ್-ಪೋಸ್ಟರ್​ಗಳ ಮೂಲಕ ಕಣ್ಣಿಗೆ ಮುದ ನೀಡಿದ್ದ ‘ರಾಬರ್ಟ್’ ಸದ್ಯದಲ್ಲೇ ಕಿವಿಗೂ ಖುಷಿ ಕೊಡುವ ಮೂಲಕ ಅಭಿಮಾನಿಗಳ ಸಂತಸ ಹೆಚ್ಚಿಸಲಿದ್ದಾನೆ. ಅರ್ಥಾತ್, ತರುಣ್ ಕಿಶೋರ್ ಸುಧೀರ್ ನಿರ್ದೇಶನದಲ್ಲಿ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯಿಸಿರುವ ‘ರಾಬರ್ಟ್’ ಸಿನಿಮಾದ ಮೊದಲ ಸಾಂಗ್ ಮಾ. 3ಕ್ಕೆ ಬಿಡುಗಡೆ ಆಗಲಿದೆ.

‘ಉಮಾಪತಿ ಫಿಲಮ್್ಸ’ ಬ್ಯಾನರ್​ನಲ್ಲಿ ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣ ಮಾಡಿರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಆ ಪೈಕಿ ಮೊದಲ ಸಾಂಗ್ ಮಂಗಳವಾರ ಸಂಜೆ ಐದಕ್ಕೆ ಆನಂದ್ ಆಡಿಯೋ ಯೂ-ಟ್ಯೂಬ್ ಚಾನೆಲ್​ನಲ್ಲಿ ರಿಲೀಸ್ ಆಗಲಿದೆ. ಬಳಿಕ ಕೆಲವು ದಿನಗಳ ಅಂತರದಲ್ಲಿ ಒಂದೊಂದಾಗಿ ಉಳಿದ ಹಾಡುಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ನಿರ್ದೇಶಕ ತರುಣ್ ಸುಧೀರ್ ತಿಳಿಸಿದ್ದಾರೆ.

ಈ ಸಿನಿಮಾದ ಪಾತ್ರವರ್ಗದಲ್ಲಿ ದರ್ಶನ್ ಮಾತ್ರವಲ್ಲದೆ ಜಗಪತಿ ಬಾಬು, ರವಿಕಿಶನ್, ಪಿ. ರವಿಶಂಕರ್, ದೇವರಾಜ್, ವಿನೋದ್ ಪ್ರಭಾಕರ್ ಮುಂತಾದ ಘಟಾನುಘಟಿಗಳು ಇದ್ದಾರೆ. ಅಲ್ಲದೆ ನಾಯಕಿಯಾಗಿ ಆಶಾ ಭಟ್ ಅಭಿನಯಿಸಿದ್ದು, ನಟಿಯರಾದ ಸೋನಲ್ ಮೊಂತೆರೊ, ತೇಜಸ್ವಿನಿ ಪ್ರಕಾಶ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸದ್ಯದ ಯೋಜನೆ ಪ್ರಕಾರ ಏ. 9ಕ್ಕೆ ಸಿನಿಮಾ ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net