

ಬೆಂಗಳೂರು: ಲವ್ ಮಾಕ್ಟೇಲ್ ಚಿತ್ರದ ಮೂಲಕ ಬೆಳ್ಳಿಪರದೆಯ ಮೇಲೆ ಮಿಂಚಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇದೀಗ ನಿಜ ಜೀವನದಲ್ಲೂ ಒಂದಾಗುವ ಕಾಲ ಸನ್ನಿಹಿತವಾಗಿದೆ.
ಹೌದು, ಮಿಲನಾ ಮತ್ತು ಕೃಷ್ಣ ಜೋಡಿಯ ಮದುವೆ ದಿನಾಂಕ ನಿಗದಿಯಾಗಿದ್ದು, ಟ್ವಿಟರ್ ಮೂಲಕ ವಿನೂತನವಾಗಿ ವಿವಾಹ ದಿನಾಂಕವನ್ನು ಅಭಿಮಾನಿಗಳ ಮುಂದೆ ಭಾವಿ ತಾರಾದಂಪತಿ ಪ್ರಸ್ತುತಪಡಿಸಿದ್ದಾರೆ.
ಟೇಬಲ್ ಮೇಲಿನ ಕೇಕ್ ಹಾಗೂ ಹೂಗುಚ್ಚದ ಮುಂದೆ ನಮ್ಮ ಮದುವೆ ಎಂಬ ಕನ್ನಡದ ನಾಮಫಲಕವಿದ್ದು, ಅದರ ಸಮೀಪವೇ ಕೃಷ್ಣ ಮತ್ತು ಮಿಲನಾ ನಿಂತಿದ್ದಾರೆ. ಅವರಿಬ್ಬರ ಹಿಂದೆ ಫೆಬ್ರವರಿ 14 ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದ್ದು, ಹರಸಿ ಆಶೀರ್ವದಿಸಿ ಎಂದು ಮಿಲನಾ ಹಾಗೂ ಕೃಷ್ಣ ಕೋರಿದ್ದಾರೆ.
ಅಲ್ಲಿಗೆ 2021ರ ಫೆವ್ರವರಿ 14ರ ಪ್ರೇಮಿಗಳ ದಿನದಂದೇ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬುದು ಖಚಿತವಾಗಿದೆ. ಅಭಿಮಾನಿಗಳ ಪಾಲಿಗೆ ಖುಷಿಯ ವಿಚಾರವಾಗಿದ್ದು, ಎಲ್ಲರೂ ಟ್ವೀಟ್ ಮೂಲಕ ಶುಭಕೋರುತ್ತಿದ್ದಾರೆ.