ಲವ್​ ಮಾಕ್​ಟೇಲ್​ ನಾಯಕನ ಫೇಸ್​ಬುಕ್​ ಪೇಜ್​ ಹ್ಯಾಕ್​!

Krishna_Huccha_2
Published on

ಸಿನಿಮಾ ತಾರೆಯರಿಗೂ ಸಾಮಾಜಿಕ ಜಾಲತಾಣಗಳಿಗೂ ಅವಿನಾಭಾವ ನಂಟು. ಸಿನಿಮಾ, ವೈಯಕ್ತಿಕ ವಿಚಾರ ಹೀಗೆ ಎಲ್ಲವನ್ನೂ ಅಭಿಮಾನಿಗಳ ಜತೆ ಹಂಚಿಕೊಳ್ಳುವುದಕ್ಕಿರುವ ಬೃಹತ್ ವೇದಿಕೆ. ಒಂದಷ್ಟು ಜನ ಜಾಲತಾಣಗಳ ಬಳಕೆಯಲ್ಲಿ ಮುಂದಿದ್ದರೆ, ಮತ್ತೆ ಕೆಲವರು ಅಷ್ಟಕಷ್ಟೇ. ಅದನ್ನೇ ಎನ್‌ಕ್ಯಾಷ್ ಮಾಡಿಕೊಳ್ಳುವ ಕೆಲ ಫೇಕ್ ಗ್ರೂಪ್‌ಗಳು, ಕಲಾವಿದರ ಹೆಸರಲ್ಲಿ ಖಾತೆ ತೆರೆದು ಅಫಿಷಿಯಲ್ ಎಂದು ಹೇಳಿಕೊಂಡಿರುತ್ತವೆ. ಇನ್ನು ಕೆಲಸವರು ಅದನ್ನೇ ಹ್ಯಾಕ್​ ಮಾಡಲು ಯತ್ನಿಸಿರುತ್ತವೆ. ಇದೀಗ ಲವ್​ ಮಾಕ್​ಟೇಲ್​ ಖ್ಯಾತಿಯ ನಟ, ನಿರ್ದೇಶಕ ಡಾರ್ಲಿಂಗ್​ ಕೃಷ್ಣ ಫೇಸ್​ಬುಕ್​ ಹ್ಯಾಕ್​ ಆಗಿದೆ.

ಹೌದು, ಇತ್ತೀಚೆಗಷ್ಟೇ ನಟಿ ಭಾವನಾ ಮೆನನ್​ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆಯನ್ನು ತೆರೆಯಲಾಗಿತ್ತು. ಆ ಖಾತೆ ನನ್ನದಲ್ಲ ಎಂದು ಬಹಿರಂಗವಾಗಿಯೇ ಭಾವನಾ ಹೇಳಿಕೊಂಡಿದ್ದರು. ಇದೀಗ ಕೃಷ್ಣ ಫೇಸ್​ಬುಕ್​ ಹ್ಯಾಕ್​ ಆಗಿದ್ದು, ಆ ಬಗ್ಗೆ ಮಾತನಾಡಿದ್ದಾರೆ. 'ಹಾಯ್​ ಎಲ್ಲರಿಗೂ.. ನನ್ನ ಫೇಸ್​ಬುಕ್​ ಪೇಜ್​ ಹ್ಯಾಕ್​ ಆಗಿತ್ತು. ಹಾಗಾಗಿ ಯಾವುದನ್ನೂ ಪೋಸ್ಟ್ ಮಾಡಲು ಆಗಿರಲಿಲ್ಲ. ಸದ್ಯ ಅದರ ರಿಕವರಿ ಪ್ರಕ್ರಿಯೆ ಮುಗಿದಿದೆ. ಪೋಸ್ಟ್​ಗಳ ಮೂಲಕ ಮತ್ತೆ ನಿಮ್ಮ ಮುಂದೆ ಬರುತ್ತೇನೆ’ ಎಂದಿದ್ದಾರೆ.

ಸದ್ಯ ಲವ್​ಮಾಕ್​ಟೇಲ್​ ಸಿನಿಮಾದ ಸ್ಕ್ರಿಪ್ಟಿಂಗ್​ ಕೆಲಸದಲ್ಲಿರುವ ಕೃಷ್ಣ, ಲಾಕ್​ಡೌನ್​ ತೆರವಾಗುತ್ತಿದ್ದಂತೆ ಶೂಟಿಂಗ್​ಗೆ ಚಾಲನೆ ನೀಡಲಿದ್ದಾರಂತೆ. ಮೊದಲ ಭಾಗಕ್ಕಿಂತ ಮತ್ತಷ್ಟು ಭಾವನಾತ್ಮಕ ಅಂಶಗಳು, ರೋಚಕತೆ ಮತ್ತು ಹಾಸ್ಯವನ್ನು ಎರಡನೇ ಭಾಗದಲ್ಲಿ ನಿರೀಕ್ಷಿಸಬಹುದಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net