ಬಡವ ರಾಸ್ಕಲ್ ಚಿತ್ರದ 'ಉಡುಪಿ ಹೋಟೆಲ್' ಹಾಡು ಶೂಟಿಂಗ್ ಯಾವ ಹೋಟೆಲ್​ನಲ್ಲಿ ನಡೆಯಿತು ಗೊತ್ತಾ?

Published on
ಬೆಂಗಳೂರು: ನಿರ್ದೇಶಕ ಶಂಕರ್ ಗುರು ಅವರ ಜೀವನ ಕಥೆಯೇ ಒಂದು ಉತ್ತಮ ಚಲನಚಿತ್ರವಾಗಿ ವೀಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಕೊರಿಯರ್ ಹುಡುಗನಾಗಿದ್ದು ಇದೀಗ ನಿರ್ದೇಶಕನಾಗುವವರೆಗೆ, ಶಂಕರ್ ಗುರು ಅವರ ಪ್ರಯಾಣವು ಎಲ್ಲರಿಗೂ ನಿಜಕ್ಕೂ ಸ್ಫೂರ್ತಿ. ಹೌದು, 'ಬಡವ ರಾಸ್ಕಲ್' ಚಿತ್ರ ಶಂಕರ್ ಗುರು ಅವರ ಜೀವನವನ್ನು ಆಧರಿಸಿ ಮಾಡಲಾಗಿರುವ ಚಿತ್ರ. ಸಿನಿಮಾಗೆ ನಾಯಕ, ನಿರ್ಮಾಪಕ ನಟ ಡಾಲಿ ಧನಂಜಯ್ ಆಗಿದ್ದು, ನಾಯಕಿಯಾಗಿ ನಟಿ ಅಮೃತ ಕಾಣಿಸಿಕೊಳ್ಳಲಿದ್ದಾರೆ. 'ಬಡವ ರಾಸ್ಕಲ್' ಚಿತ್ರ ಮಧ್ಯಮ ವರ್ಗದ ಕುಟುಂಬ ಮತ್ತು ಅದರ ಮೌಲ್ಯಗಳ ಕುರಿತಾದ ಚಿತ್ರ ಎಂದು ಈಗಾಗಲೇ ತಿಳಿದುಬಂದಿದೆ.
ಚಿತ್ರದಲ್ಲಿ ನಟ ರಂಗಾಯಣ ರಘು, ನಟಿ ತಾರಾ ಸೇರಿ ಹಲವು ನಟರು ಬೇರೆ ಬೇರೆ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಡಿ.24 ರಂದು 'ಬಡವ ರಾಸ್ಕಲ್' ತೆರೆಗೆ ಅಪ್ಪಳಿಸಲು ರೆಡಿಯಾಗಿದ್ದು, ತಮ್ಮ ಸಿನಿಮಾದ ಒಂದಿಷ್ಟು ಮಾಹಿತಿಯನ್ನು ಚಿತ್ರದ ನಟ ಡಾಲಿ ಧನಂಜಯ್ 'ವಿಜಯವಾಣಿ'ಯೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು, ಚಿತ್ರದಲ್ಲಿ 'ಉಡುಪಿ ಹೋಟೆಲ್' ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಜೊತೆಗೆ, ಆ ಹಾಡಿನಲ್ಲಿ ಒಂದಿಷ್ಟು ದೃಶ್ಯಗಳನ್ನ ಹಳೆಯ ಒಂದು ಲೋಕಲ್ ಹೋಟೆಲ್​​ನಲ್ಲಿ ಚಿತ್ರೀಕರಿಸಲಾಗಿದೆ. ಆ ಹೋಟೆಲ್ ಯಾವುದು ಎಂಬ ಕುತೂಹಲ ಹಲವರಲ್ಲಿ ಇದೆ. ಅಂದಹಾಗೆ, ಅದೇ ಹೋಟೆಲ್​ನಲ್ಲಿ ಈ ಸಂದರ್ಶನವನ್ನು ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net