ಸೈನೈಡ್ ಕಿಲ್ಲರ್ ಮೋಹನ್-ಮಲ್ಲಿಕಾ ಮುಖಾಮುಖಿ!

Mohan
Published on

ಇಡೀ ಭಾರತವನ್ನು ಬೆಚ್ಚಿ ಬೀಳಿಸಿದ್ದ ಪ್ರಥಮ ಮಹಿಳಾ ಸೈನೈಡ್ ಕಿಲ್ಲರ್ ಮಲ್ಲಿಕಾಳ ಕ್ರೖೆಂ ಕಥೆ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಇದೀಗ ಇದೇ ಕಥೆಗೆ ಸೈನೈಡ್ ಮಲ್ಲಿಕಾ ಜತೆಗೆ ಸೈನೈಡ್ ಮೋಹನ ಸಹ ಸೇರ್ಪಡೆಯಾಗಲಿದ್ದಾನೆ. ಅಂದರೆ, ಈ ಎರಡು ಪಾತ್ರಗಳನ್ನು ಈ ಸಿನಿಮಾದಲ್ಲಿ ಒಂದುಗೂಡಿಸಿ ಅದಕ್ಕೊಂದು ಕಾಲ್ಪನಿಕ ಟಚ್ ಕೊಟ್ಟಿದ್ದಾರೆ ನಿರ್ದೇಶಕ ಗುರು.

ವಾಸ್ತವದಲ್ಲಿ ಇವರ ಕೆಲಸ ಒಂದೇ ಆದರೂ, ಇಬ್ಬರು ಒಂದು ಬಾರಿಯೂ ಮುಖಾಮುಖಿ ಆಗಿರುವುದಿಲ್ಲ. ಚಿತ್ರಕ್ಕಾಗಿ ಇಬ್ಬರು ಒಂದುಗೂಡಿಸುವ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ. ಅಷ್ಟೇ ಅಲ್ಲ ಸೈನೈಡ್ ಮೋಹನ ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು, ಮೇಲುಕೋಟೆ, ಹಾಸನ, ಮಡಿಕೇರಿ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಶರವಣ ಸಂಗೀತ, ಶಂಕರ್ ಛಾಯಾಗ್ರಹಣ ಸಂಕಲನ ವಿಜಯ್.ಎಂ.ಕುಮಾರ್ ಅವರದಾಗಿದೆ. ಎಂಟರ್​ಟೈನ್​ವೆುಂಟ್ ಗುರು ಪ್ರೊಡಕ್ಷನ್ ಮೂಲಕ ಸಿದ್ಧವಾಗಿರುವ ಚಿತ್ರಕ್ಕೆ ಬಲರಾಂ ಬೈಸಾನಿ ಸಹ ನಿರ್ಮಾಪಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net