

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು’ ಚಾಂಪಿಯನ್ಷಿಪ್ ಶೋ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ವಾರಾಂತ್ಯದ ಮನರಂಜನೆಯ ಮಹಾಪೂರವನ್ನೇ ಹರಿಸುವ ಸೀಸನ್ 2ರ ಗ್ರಾ್ಯಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಮತ್ತು ಭಾನುವಾರ (ಜುಲೈ 10-11) ರಾತ್ರಿ 9ಗಂಟೆಗೆ ಜೀ ಕನ್ನಡದಲ್ಲಿ ಈ ಶೋ ಪ್ರಸಾರವಾಗಲಿದೆ.
ಸರಿ ಸುಮಾರು 37 ವಾರಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ 220ಕ್ಕೂ ಹೆಚ್ಚು ನಾಟಕಗಳು, ಹಾಸ್ಯದ ಜತೆಗೆ ಸಾಮಾಜಿಕ ಸಂದೇಶಗಳು ಹಾಗೂ ಪ್ರಯೋಗಾತ್ಮಕ ಸ್ಕಿಟ್ಗಳು ನೋಡುಗರ ಗಮನ ಸೆಳೆದಿವೆ. ಕರೊನಾ ಲಾಕ್ಡೌನ್ ಸಮಯದಲ್ಲಿ ನಾಡಿನ ಜನತೆಗೆ ನಗುವಿನ ಔಷಧವನ್ನೂ ನೀಡಿದೆ. ಎಂದಿನಂತೆ ಕಾರ್ಯಕ್ರಮದ ತೀರ್ಪಗಾರರಾದ ‘ನವರಸ ನಾಯಕ’ ಜಗ್ಗೇಶ್, ಯೋಗರಾಜ್ ಭಟ್, ರಕ್ಷಿತಾ ಕಾರ್ಯಕ್ರಮದ ಸಾರಥ್ಯ ವಹಿಸಿದರೆ, ನಿರೂಪಕ ಮಾಸ್ಟರ್ ಆನಂದ್ ಗ್ರಾ್ಯಂಡ್ ಫಿನಾಲೆಯ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಒಟ್ಟಾರೆ ಆರು ತಂಡಗಳ ವಿಭಿನ್ನ ಹಾಸ್ಯ ನಾಟಕಗಳ ಜತೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನ ಪ್ರತಿಭೆಗಳು ಕೂಡ ಕರುನಾಡನ್ನು ರಂಜಿಸಲು ಸಿದ್ದರಾಗಿದ್ದಾರೆ. ಈ ಎಲ್ಲ ಅವಿಸ್ಮರಣೀಯ ಕ್ಷಣಗಣಗಳಿಗೆ ಗ್ರಾ್ಯಂಡ್ ಫಿನಾಲೆ ವೇದಿಕೆ ಸಜ್ಜಾಗಿದ್ದು, ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.